ಮೈಸೂರು : ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಿರುದ್ಧ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ‘ಸುಮಲತಾ ಚುನಾವಣೆ ಹೊಸ್ತಿಲಲ್ಲಿ ಕೃತಕ ಭಾವನೆ ಮೂಡಿಸಲು ಹೊರಟಿದ್ದಾರೆ. ಜನ ಸುಮಲತಾ ಅವರನ್ನ ನಂಬುವುದಿಲ್ಲ. ಸುಮಲತಾ ಎಮೋಷನಲ್ ಆಗಿ ಮಾತಾಡುತ್ತಾರೆ. ಅವರಿಗಿಂತ ಜಾಸ್ತಿ ಎಮೋಷನಲ್ ಆಗಿ ಮಾತಾಡಲು ನಮಗೂ ಬರುತ್ತೆ. ಮಂಡ್ಯದ ಜನಕ್ಕೆ ಯಾರು ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಕಣ್ಣೀರು ಹಾಕಿದ್ದ ಮಾತ್ರಕ್ಕೆ ಮಂಡ್ಯದ ಜನ ಕರಗಿ ಹೋಗಲ್ಲ’ ಎಂದರು.