Friday, April 12, 2024

ಪುತ್ರ ನಿಖಿಲ್​ ಗೆಲುವಿಗಾಗಿ ಸಿಎಂ ಕುಮಾರಸ್ವಾಮಿ ರಣತಂತ್ರ..!

ಮಂಡ್ಯ : ಲೋಕಸಭಾ ಚುನಾವಣೆ ರಂಗೇರಿದೆ. ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ಅವರು ಮಂಡ್ಯ ರಣಕಣದಲ್ಲಿ ಮೈತ್ರಿ ಕ್ಯಾಂಡಿಡೇಟ್ ಆಗಿ ಕಣದಲ್ಲಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿ ಸುಮಲತಾ ಅಂಬರೀಶ್ ಕ್ಷೇತ್ರದಾದ್ಯಂತ ಮಿಂಚಿನ ಸಂಚಲನವನ್ನುಂಟು ಮಾಡಿದ್ದಾರೆ.
ಇದೀಗ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಪುತ್ರನ ಗೆಲುವಿಗೆ ರಣತಂತ್ರ ರೂಪಿಸಿದ್ದಾರೆ..ತಾವೇ ಮಗನ ಪರವಾಗಿ ಬ್ಯಾಟಿಂಗ್​ ಮಂಡ್ಯ ಲೋಕಸಭಾ ಅಂಗಳಕ್ಕೆ ಇಳಿಯಲು ರೆಡಿಯಾಗಿದ್ದಾರೆ. ಇಂದು ಸಂಜೆ ಮಂಡ್ಯಕ್ಕೆ ತೆರಳಲಿರುವ ಕುಮಾರಸ್ವಾಮಿ ಅವರು ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಮಂಡ್ಯದಲ್ಲಿ ವಾಸ್ತವ್ಯ ಹೂಡುವ ಕುಮಾರಸ್ವಾಮಿ ಅವರು ಇವತ್ತು ಮತ್ತು ನಾಳೆ ಚುನಾವಣಾ ಕಾರ್ಯತಂತ್ರ ರೂಪಿಸಲಿದ್ದಾರೆ. ಸ್ಥಳೀಯ ಜೆಡಿಎಸ್​ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ.

RELATED ARTICLES

Related Articles

TRENDING ARTICLES