ಬೆಂಗಳೂರು : ಮಂಡ್ಯ ‘ಲೋಕ’ಕಣದಲ್ಲಿ ಮೈತ್ರಿಗೆ ಸೆಡ್ಡು ಹೊಡೆದು ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರು ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಪ್ರೆಸ್ಮೀಟ್ ನಡೆಸಿದರು. ಸುಮಲತಾ ಅವರ ಸುದ್ದಿಗೋಷ್ಠಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರೂ ಸಾಥ್ ನೀಡಿದ್ದಾರೆ.
ಹಿರಿಯ ನಟ ದೊಡ್ಡಣ್ಣ, ಪ್ರೊಡ್ಯೂಸರ್ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಗಣ್ಯರು, ಸುಮಲತಾ ಅವರ ಪುತ್ರ, ನಟ ಅಭಿಷೇಕ್ ಅಂಬರೀಶ್ ಮತ್ತಿತರರು ಉಪಸ್ಥಿತರಿದ್ದರು.
ಮಾರ್ಚ್ 20ರಂದು ನಾಮಪತ್ರ ಸಲ್ಲಿಕೆ ಮಾಡಿ, ಅದೇ ದಿನ ಬೃಹತ್ ಸಮಾವೇಶ ನಡೆಸಿ ತಮ್ಮ ಬಲ ಪ್ರದರ್ಶನ ಮಾಡಲಿದ್ದಾರೆ. ಸಮಾವೇಶಲ್ಲಿ ಚಿತ್ರರಂಗದ ಗಣ್ಯರ ಸಾಥ್ ಮಾತ್ರವಲ್ಲದೆ ರಾಜಕೀಯ ನಾಯಕರ ಭಾರೀ ಬೆಂಬಲ ಸಿಗುವ ನಿರೀಕ್ಷೆಯೂ ದಟ್ಟವಾಗಿದೆ.