Friday, July 19, 2024

ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ..!

ಪಣಜಿ : ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನರಾಗಿದ್ದು, ಇಂದು ಸಂಜೆ ಅವರ ಅಂತ್ಯಕ್ರಿಯೆ ನೆರವೇರಲಿದೆ. ಪರಿಕ್ಕರ್ ಅವರ ಅಂತ್ಯಕ್ರಿಯೆಗೂ ಮುನ್ನವೇ ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿಯಲು ಹಪಹಪಿಸುತ್ತಿದೆ.
ಗೋವಾದಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಕಾಂಗ್ರೆಸ್​ ಸರ್ಕಾರ ರಚಿಸೋಕೆ ಅವಕಾಶ ಕೊಡಿ ಅಂತ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಗೆ ಪತ್ರ ಬರೆದಿದೆ.
ಸರ್ಕಾರ ರಚಿಸೋಕೆ ಅವಕಾಶ ಕೊಡಿ ಎಂಬ ಕಾಂಗ್ರೆಸ್​ ಮನವಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಸೋಶಿಯಲ್​ ಮೀಡಿಯಾದಲ್ಲಿಯೂ ಬಹಳಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಸಾವಿನಲ್ಲೂ ರಾಜಕೀಯ ಮಾಡ ಹೊರಟ ಕಾಂಗ್ರೆಸ್ ನಡೆ ಟೀಕೆಗೆ ಗುರಿಯಾಗಿದೆ.

RELATED ARTICLES

Related Articles

TRENDING ARTICLES