Monday, December 23, 2024

ತುಮಕೂರಲ್ಲಿ ದೇವೇಗೌಡ್ರು ಕಣಕ್ಕಿಳಿದ್ರೆ ಸ್ವಾಗತ, ಇಲ್ದೇ ಇದ್ರೆ ಕಾಂಗ್ರೆಸ್​ಗೇ ಬಿಟ್ಟು ಕೊಡಲಿ : ಡಿಸಿಎಂ

ಬೆಂಗಳೂರು : ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಟ್ಟಿದ್ದಕ್ಕೆ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹಾಲಿ ಸಂಸದರಿರುವ (ಎಸ್​.ಪಿ ಮುದ್ದಹನುಮೇಗೌಡ) ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಟ್ಟ ವರಿಷ್ಠರ ತೀರ್ಮಾನ ಅಸಮಧಾನ ತಂದಿದೆ, ಆತಂಕವನ್ನುಂಟು ಮಾಡಿದೆ ಎಂದು ಪರಮೇಶ್ವರ್​ ಬೇಸರ ತೋಡಿಕೊಂಡಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಪರಂ, 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ರು. ಗೆದ್ದ ಅಭ್ಯರ್ಥಿಗಳ ಬದಲಾವಣೆ ಬೇಡ ಅಂತ ಮೈತ್ರಿ ಆಗಿತ್ತು. ನಾವು ಮಂಡ್ಯ, ಹಾಸನ‌ ಕೇಳೊದು ಬೇಡ ಎಂದಾಗಿತ್ತು ಎಂದು ತಿಳಿಸಿದ್ರು.
ತುಮಕೂರಿನಲ್ಲಿ ದೇವೇಗೌಡ್ರು ಸ್ಪರ್ಧಿಸುವುದಾದ್ರೆ ಸ್ವಾಗತ, ಬೇರೆ ಅವರಿಗೆ ಟಿಕೆಟ್​ ಕೊಡೋದಾದ್ರೆ ಬೇಡ, ಕಾಂಗ್ರೆಸ್​ಗೇ ಕ್ಷೇತ್ರವನ್ನು ಬಿಟ್ಟು ಕೊಡಲಿ. ತುಮಕೂರನ್ನು ಬಿಟ್ಟು ಕೊಡೋ ನಂಬಿಕೆಯಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

RELATED ARTICLES

Related Articles

TRENDING ARTICLES