Saturday, September 14, 2024

ಸುಮಲತಾ ಸ್ಪರ್ಧೆ ಬಗ್ಗೆ ತಲೆಕೆಡಿಸಿಕೊಳ್ಳಲ್ವಂತೆ ಸಿಎಂ..!

ಚಿಕ್ಕಮಗಳೂರು: ಸುಮಲತಾ ಅವರು ಸ್ಪರ್ಧಿಸೋ ಬಗ್ಗೆ ತಲೆಕೆಡಿಸ್ಕೊಳ್ಳಲ್ಲ ಅಂತ ಮುಖ್ಯಮಂತ್ರಿ ಹೆಚ್​. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧಿಸೋ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ ಅವರು, “ಎಲ್ಲಾ ಸಿನಿಮಾದವರೂ ಈ ಮೊದಲು ಚುನಾವಣೆಗೆ ಬಂದಿದ್ದಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಮಂಡ್ಯದ ಜನರ ಪರವಾಗಿ ಏನೇನು ಮಾಡ್ತಾರೆ ನೋಡೋಣ” ಅಂತ ಹೇಳಿದ್ದಾರೆ.

ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತಾ, ಪಕ್ಷೇತರರಾಗಿ ಸ್ಪರ್ಧಿಸ್ತಾರಾ, ಅಥವಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ ಎಂಬ  ಬಗ್ಗೆ ಕುತೂಹಲವಿತ್ತು. ತಮ್ಮ ಸ್ಪರ್ಧೆ ಬಗ್ಗೆ 18ರಂದು ತಿಳಿಸುವುದಾಗಿ ಸುಮಲತಾ ಹೇಳಿದ್ದರು. ಅದರಂತೆಯೇ ಇಂದು ಸುದ್ದಿಗೋಷ್ಠಿ ನಡೆಸಿ ಸುಮಲತಾ ಅವರು ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರೋದನ್ನು ಸ್ಪಷ್ಟಪಡಿಸಿದ್ದಾರೆ.

RELATED ARTICLES

Related Articles

TRENDING ARTICLES