Thursday, May 30, 2024

ಮುದ್ದಹನುಮೇಗೌಡರೊಂದಿಗೆ ದೆಹಲಿಗೆ ಕಾಂಗ್ರೆಸ್ ನಾಯಕರು..!

ತುಮಕೂರು: ತುಮಕೂರು ಕ್ಷೇತ್ರ ಉಳಿಸಿಕೊಳ್ಳಲು ಮುದ್ದಹನುಮೇಗೌಡರೊಂದಿಗೆ ಜಿಲ್ಲಾ ಕಾಂಗ್ರೆಸ್​ ಮುಖಂಡರು ದೆಹಲಿಗೆ ತೆರಳಿದ್ದಾರೆ. ದೆಹಲಿಗೆ ತೆರಳಿದ ತುಮಕೂರು ಕಾಂಗ್ರೆಸ್​​​ ನಾಯಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿದ್ದಾರೆ. ಮುದ್ದಹನುಮೇಗೌಡರೊಂದಿಗೆ ದೆಹಲಿ ತಲುಪಿದ ಬೆಂಬಲಿಗರು ಕ್ಷೇತ್ರ ಕಾಂಗ್ರೆಸ್​ಗೆ ಬಿಟ್ಟುಕೊಡುವಂತೆ ಕೇಳಿ, ಲೋಕಸಭಾ ಟಿಕೆಟ್​​​​ ಮುದ್ದಹನುಮೇಗೌಡರಿಗೆ ನೀಡುವಂತೆ ವೇಣುಗೋಪಾಲ್ ಅವರನ್ನು ಒತ್ತಾಯಿಸಲಿದ್ದಾರೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಅನಿಲ್ ಪಾಟೀಲ್, ಕಾಂಗ್ರೆಸ್ ಅಧ್ಯಕ್ಷರು ಪರಮೇಶ್ವರ ಆಪ್ತ ಅರಕೆರೆ ಶಂಕರ್ ಅವರೂ ದೆಹಲಿಗೆ ತೆರಳಿದ್ದಾರೆ.

ಲೋಕಸಭಾ ಚುನಾವಣೆ ಡೇಟ್​ ಫಿಕ್ಸ್​ ಆದಾಗಿನಿಂದಲೂ ದೋಸ್ತಿಗೆ ಸೀಟು ಹಂಚಿಕೆ ಕಗ್ಗಂಟಾಗಿದೆ. ತುಮಕೂರು ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿರುವುದು ಜಿಲ್ಲಾ ಕಾಂಗ್ರೆಸ್​ ನಾಯಕರ ಮತ್ತು ಮುದ್ದಹನುಮೇಗೌಡರ ಬೆಂಬಲಿಗರ ಅಸಮಧಾನಕ್ಕೆ ಕಾರಣವಾಗಿದೆ. ತುಮಕೂರು ಲೋಕಸಭಾ ಚುನಾವಣಾ ಅಖಾಡ ರಂಗೇರಿದ್ದು, ಕ್ಷೇತ್ರ ಉಳಿಸಿಕೊಳ್ಳಲು ಕೈ ನಾಯಕರು ಕಸರತ್ತು ನಡೆಸಿದ್ದಾರೆ.

RELATED ARTICLES

Related Articles

TRENDING ARTICLES