Monday, December 23, 2024

‘ಸಸ್ಪೆಂಡ್ ಮಾಡಿದ್ರೂ ಪರ್ವಾಗಿಲ್ಲ, ಸುಮಲತಾಗೇನೇ ಸಪೋರ್ಟ್’

ಮೈಸೂರು: ನಮ್ಮನ್ನ ಸಸ್ಪೆಂಡ್ ಮಾಡಿದ್ರು ಪರವಾಗಿಲ್ಲ. ನಾನು ಸುಮಲತಾ ಪರವಾಗಿಯೇ ಪ್ರಚಾರ ಮಾಡೋದು ಅಂತ ಮೈಸೂರಿನ ಕೆ.ಆರ್.ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸುಬ್ರಹ್ಮಣ್ಯ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರೋ ಸುಮಲತಾ ಅಂಬರೀಶ್​ಗೆ ಮಂಡ್ಯ ಕಾಂಗ್ರೆಸ್​ ನಾಯಕರು ಈ ಮೊದಲೇ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದರು. ಇಂದು ಸುಮಲತಾ ಅವರು ಮೈಸೂರಿನಲ್ಲಿ ಪ್ರಚಾರ ನಡೆಸಿದ್ದಾರೆ. ಬಹಿರಂಗವಾಗಿ ನಾನು ಸುಮಲತಾರಿಗೆ ಬೆಂಬಲಿಸುತ್ತೇನೆ ಅಂತ ಕಾಂಗ್ರೆಸ್ ಮುಖಂಡ ಸುಬ್ರಮಣ್ಯ ಹೆಳಿದ್ದಾರೆ. ನಿನ್ನೆಯಷ್ಟೆ ಕಾಂಗ್ರೆಸ್ ಮುಖಂಡರಿಗೆ ಜೆಡಿಎಸ್‌ ಸಚಿವ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದ್ದರು. ಮಂಡ್ಯ ಕ್ಷೇತ್ರದಲ್ಲಿ ನಿಖಿಲ್​ ಕುಮಾರಸ್ವಾಮಿ ಹಾಗೂ ಸುಮಲತಾ ಮುಖಾಮುಖಿಯಾಗಿದ್ದು, ಜಿಲ್ಲಾ ಕಾಂಗ್ರೆಸ್​ ನಾಯಕರು ಸುಮಲತಾ ಬೆಂಬಲಕ್ಕೆ ನಿಂತಿರುವುದು ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

RELATED ARTICLES

Related Articles

TRENDING ARTICLES