Friday, April 12, 2024

ಸಿದ್ದರಾಮಯ್ಯ ಅವರಿಗೆ ‘ಉತ್ತರ’ದ ಟೆನ್ಶನ್​..!

ಬೆಂಗಳೂರು: ಸೀಟು ಹಂಚಿಕೆ ವಿಚಾರ ದೋಸ್ತಿಗೆ ಕಗ್ಗಂಟಾಗಿದ್ದು, ಜೆಡಿಎಸ್​ಗೆ ಸೀಟುಗಳನ್ನು ಬಿಟ್ಟುಕೊಟ್ಟಿರುವುದಕ್ಕೆ ಆಯಾ ಜಿಲ್ಲಾ ಕಾಂಗ್ರೆಸ್​ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೀಟು ಜೆಡಿಎಸ್​ಗೆ ಬಿಟ್ಟುಕೊಟ್ಟಿದ್ದು, ಗೊಂದಲ ಸೃಷ್ಟಿಯಾಗಿದ್ದು, ಬೆಂಗಳೂರು ಉತ್ತರ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದಕ್ಕೆ ಅಲ್ಲಿನ ಶಾಸಕರು ತಗಾದೆ ಎತ್ತಿದ್ದಾರೆ. ಉತ್ತರ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್​. ಡಿ ದೇವೇಗೌಡರ ಸ್ಪರ್ಧೆ ವಿಚಾರವಾಗಿ ಕಾಂಗ್ರೆಸ್​​ ಶಾಸಕರು ಜೆಡಿಎಸ್​​ ಮುಂದೆ ಷರತ್ತುಗಳನ್ನು ಇಟ್ಟಿದ್ದಾರೆ. “ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಯಾರೇ ಸ್ಪರ್ಧಿಸಲಿ ಮೊದಲು ನಮ್ಮ ಬೇಡಿಕೆಗಳನ್ನು ಈಡೇರಿಸಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಕೈ ಶಾಸಕರು ಷರತ್ತುಗಳು ಇಟ್ಟಿರುವ ಹಿನ್ನಲೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಬೆಂಗಳೂರು ಉತ್ತರ ಕ್ಷೇತ್ರದ ಶಾಸಕರ ಜೊತೆ ಸಭೆ ನಡೆಸ್ತಾ ಇದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದ ವಿಚಾರದಲ್ಲಿ ದೋಸ್ತಿಗಳ ನಡುವೆ ಕುಸ್ತಿ ಆರಂಭವಾಗಿದ್ದು, ದೇವೇಗೌಡರ ಸ್ಪರ್ಧೆಗೆ ಕಾಂಗ್ರೆಸ್ ಶಾಸಕರು ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಯಾರೇ ಸ್ಪರ್ಧಿಸಲಿ ಮೊದಲು ನಮ್ಮ ಬೇಡಿಕೆಗಳನ್ನು ಈಡೇರಿಸಿ ಅಂತ ಎಸ್​​​.ಟಿ.ಸೋಮಶೇಖರ್, ಬೈರತಿ ಬಸವರಾಜು, ಬೈರತಿ ಸುರೇಶ್ ಸೇರಿ ಹಲವು ಕಾಂಗ್ರೆಸ್​​​​ ಶಾಸಕರು ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಈ ಕುರಿತು ಚರ್ಚೆಗೆ ಇಂದು ಸಂಜೆ 4ಕ್ಕೆ ಸಭೆ ನಡೆಸಲಾಗುತ್ತದೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.

RELATED ARTICLES

Related Articles

TRENDING ARTICLES