Friday, November 22, 2024

ಕ್ರಿಕೆಟಿಗ ಶ್ರೀಶಾಂತ್‌ ಮೇಲಿನ ಅಜೀವ ನಿಷೇಧ ತೆರವು..!

ನವದೆಹಲಿ: ಕ್ರಿಕೆಟಿಗ ಶ್ರೀಶಾಂತ್​ ಅವರ ಮೇಲಿನ ಅಜೀವ ನಿಷೇಧವನ್ನು ರದ್ದು​ ಮಾಡಿ ಸುಪ್ರೀಂಕೋರ್ಟ್​ ಆದೇಶ ನೀಡಿದೆ. ಹಾಗೆಯೇ ಶ್ರೀಶಾಂತ್​ಗೆ ವಿಧಿಸಿರುವ ಅಜೀವ ನಿಷೇಧ ತೀರ್ಪನ್ನು ಪುನರ್​ ಪರಿಶೀಲಿಸುವಂತೆ ಬಿಸಿಸಿಐನ ಶಿಸ್ತು ಸಮಿತಿಗೆ ಕೋರ್ಟ್​ ನಿರ್ದೇಶಿಸಿದೆ. ಶ್ರೀಶಾಂತ್​ಗೆ ಶಿಕ್ಷೆಯ ಪ್ರಮಾಣವನ್ನು ಇಳಿಸಿ ಮುಂದಿನ ಮೂರು ತಿಂಗಳೊಳಗಾಗಿ ಹೊಸ ತೀರ್ಪು ನೀಡುವಂತೆ ಬಿಸಿಸಿಐ ಶಿಸ್ತು ಸಮಿತಿಗೆ ಕೋರ್ಟ್​ ಸೂಚನೆ ನೀಡಿದೆ.

ತಮ್ಮ ಮೇಲಿನ ಆರೋಪಗಳನ್ನು ಮತ್ತು ಶಿಕ್ಷೆ ರದ್ದುಗೊಳಿಸುವಂತೆ ಶ್ರೀಶಾಂತ್​ ಸಲ್ಲಿಸಿದ ಅರ್ಜಿಯನ್ನು ಕೋರ್ಟ್​ ಪುರಸ್ಕರಿಸಿಲ್ಲ. ಶ್ರೀಶಾಂತ್​ಗೆ ವಿಧಿಸಲಾಗಿರುವ ಶಿಕ್ಷೆಯ ಪ್ರಮಾಣ ಇಳಿಕೆ ಬಗ್ಗೆ ವಿಚಾರಣೆಗೆ ಅವಕಾಶ ನೀಡಲಾಗುತ್ತದೆ ಅಂತ ನ್ಯಾ. ಅಶೋಕ್​ ಭೂಷಣ್​, ಕೆ. ಎಂ ಜೋಸೆಫ್ ಒಳಗೊಂಡ ದ್ವಿಸದಸ್ಯ ಪೀಠ ಸ್ಪಷ್ಟಪಡಿಸಿದೆ.

2017ರ ಅಕ್ಟೋಬರ್​ನಲ್ಲಿ ಬಿಸಿಸಿಐ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಶ್ರೀಶಾಂತ್​ಗೆ​ ಕ್ರಿಕೆಟ್ ಜೀವನದಿಂದ ಅಜೀವ ನಿಷೇಧ​ ಹೇರಿ ತೀರ್ಪು ನೀಡಿತ್ತು. 2017 ಮೇನಲ್ಲಿ ಏಕಸದಸ್ಯ ಪೀಠ ನಿಷೇಧವನ್ನು ಹಿಂತೆಗೆದುಕೊಂಡು ತೀರ್ಪು ನೀಡಿತ್ತು. ಹಾಗೇ ಶ್ರೀಶಾಂತ್​ ಮೇಲಿನ ಅಜೀವ ನಿಷೇಧವನ್ನು ತೆರವುಗೊಳಿಸುವಂತೆ ಬಿಸಿಸಿಐಗೂ ನಿರ್ದೇಶಿಸಿತ್ತು.

2013ರಲ್ಲಿ ಐಪಿಎಲ್​ನಲ್ಲಿ ಶ್ರೀಶಾಂತ್​ ಮೇಲೆ ಸ್ಪಾಟ್​ ಫಿಕ್ಸಿಂಗ್​ ಆರೋಪ ಕೇಳಿ ಬಂದಿದ್ದು, ವಿಚಾರಣೆ ನಂತರ ಅಜೀವ ನಿಷೇಧವನ್ನು ಹೇರಲಾಗಿತ್ತು.

RELATED ARTICLES

Related Articles

TRENDING ARTICLES