Sunday, October 6, 2024

ಅಪ್ಪನೇ ನಂಗೆ ವೋಟ್​ ಮಾಡಿರ್ಲಿಲ್ಲ : ಅನಂತ್​​​​ ಕುಮಾರ್​ ಹೆಗಡೆ

ಕಾರವಾರ : ‘ನಮ್ಮ ಅಪ್ಪನೇ ನಂಗೆ ವೋಟ್​​​ ಹಾಕಿರಲಿಲ್ಲ’ ಅಂತ ಕೇಂದ್ರ ಸಚಿವ ಅನಂತ್​ಕುಮಾರ್ ಹೆಗಡೆ ಹೇಳಿದ್ದಾರೆ.
ಉತ್ತರ ಕನ್ನಡದ ಕಾರವಾರದಲ್ಲಿ ಮಾತನಾಡಿದ ಅವರು, ನಂಗೆ ಮೊದಲ ಬಾರಿ ಟಿಕೆಟ್​ ಸಿಕ್ಕಾಗ ನಮ್ಮ ಅಪ್ಪ ವಿರೋಧಿಸಿದ್ದರು. ಬಿಜೆಪಿ ಟಿಕೆಟ್ ಸಿಕ್ಕಾಗ ಬೈದಿದ್ದರು. ಕಾಂಗ್ರೆಸ್ ಬಿಟ್ಟು ನೀನು ಬಿಜೆಪಿಗೆ ಹೋಗಿದ್ಯ ಎಂದಾದರೆ ನೀನು ನಮ್ ಮನೆತನಕ್ಕೆ ಕಳಂಕ ಅಂದಿದ್ದರು. ಅವರಿಗೆ ಕಾಂಗ್ರೆಸ್​ ಬಿಟ್ಟು ಬೇರೆ ಪಕ್ಷಕ್ಕೆ ವೋಟ್​ ಹಾಕಿ ಗೊತ್ತಿರಲಿಲ್ಲ. ಕಳೆದ 5 ಬಾರಿ ಚುನಾವಣೆಯಲ್ಲಿ ನಮ್ಮಪ್ಪ ನಂಗೆ ವೋಟ್​ ಆಗಿದ್ದಾರೆ ಅಂತ ನಂಗೆ ಗೊತ್ತಿಲ್ಲ. ಆದ್ರೆ, ಈ ಬಾರಿ ನಮ್ಮಪ್ಪ ಬಂದು ಈ ಬಾರಿ ಬಿಜೆಪಿಗೆ ವೋಟ್​ ಕೊಡುವ ಅಂತ ಮಾಡಿದ್ದೀನಿ. ನಿನ್ ನೋಡಿ ಅಲ್ಲ, ಮೋದಿ ನೋಡಿ ಅಂತ ಹೇಳಿದ್ರು’ ಎಂದರು.
ಈಗ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್​ ಅವರಿಗೆ ತಮ್ಮವರಿಗೆ ಟಿಕೆಟ್​ ಕೊಡೋ ಮನಸ್ಸೇ ಇಲ್ಲ. ಜೆಡಿಎಸ್​ಗೆ ಕೊಟ್ರೆ ಸಾಕು ಅಂತ ಅವರಿಗೆ ಟಿಕೆಟ್ ಕೊಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು.

RELATED ARTICLES

Related Articles

TRENDING ARTICLES