Tuesday, October 15, 2024

ಜೆಡಿಎಸ್​ ಸೇರಲು ನಿರಾಕರಿಸಿದರಾ ಸುಮಲತಾ? ಡಿ.ಸಿ ತಮ್ಮಣ್ಣ ಅವರ ಪ್ರಯತ್ನ ವಿಫಲವಾಗಿದ್ದೇಕೆ?

ಮಂಡ್ಯ : ಲೋಕಸಭಾ ಚುನಾವಣೆ ಡೇಟ್​ ಅನೌನ್ಸ್ ಆಗುವ ಮುನ್ನವೇ ರಂಗೇರಿದ್ದ ಮಂಡ್ಯ ಲೋಕಸಭಾ ಚುನಾವಣಾ ಕಣ ಈಗ ಮತ್ತಷ್ಟು ಸದ್ದು ಮಾಡ್ತಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಮಂಡ್ಯ ಕ್ಷೇತ್ರವೇ ಹೆಚ್ಚು ಗಮನಸೆಳೆಯುತ್ತಿದೆ, ಜೊತೆಗೆ ಸಿಕ್ಕಾಪಟ್ಟೆ ಕುತೂಹಲವನ್ನು ಹುಟ್ಟುಹಾಕಿದೆ.
ಮೈತ್ರಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ಅವರು ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಹೀಗಾಗಿ ಟಿಕೆಟ್​ ನಿರೀಕ್ಷಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ‘ಕೈ’ ಕೊಟ್ಟಿದೆ ಕಾಂಗ್ರೆಸ್​..! ‘ಕೈ’ ಟಿಕೆಟ್​ ಸಿಗದೇ ಇದ್ರೆ ಏನಂತೆ, ನಾನು ಪಕ್ಷೇತರಳಾಗಿ ಕಣಕ್ಕಿಳಿಯುತ್ತೇನೆ ಅಂತ ಡಿಸೈಡ್ ಮಾಡಿದ್ದಾರೆ ಸುಮಲತಾ ಅಂಬರೀಶ್. ಆದ್ದರಿಂದ ಮಂಡ್ಯ ಸ್ಟಾರ್​ ವಾರ್​ಗೆ ವೇದಿಕೆಯಾಗಿದೆ.
ಈ ನಡುವೆ ಮದ್ದೂರಿನಲ್ಲಿ ಸಚಿವ ಡಿ.ಸಿ ತಮ್ಮಣ್ಣ ಅವರು ಹೊಸ ಬಾಂಬ್​ ಸಿಡಿಸಿದ್ದಾರೆ. ಸುಮಲತಾ ಅವರಿಗೆ ಜೆಡಿಎಸ್​ ಟಿಕೆಟ್​ ಕೊಡಿಸುವ ಯತ್ನವನ್ನು ತಮ್ಮಣ್ಣ ಮಾಡಿದ್ದರಂತೆ. ಒಂದು ವೇಳೆ ಸುಮಲತಾ ಅಂಬರೀಶ್ ಅವರು ತೆನೆ ಹೊರಲು ರೆಡಿಯಾಗಿದ್ದರೆ ನಿಖಿಲ್​ ಬದಲಿಗೆ ಅವರೇ ಮಂಡ್ಯದ ಜೆಡಿಎಸ್​ ಅಭ್ಯರ್ಥಿ ಆಗುತ್ತಿದ್ದರಂತೆ..!
ಈ ಬಗ್ಗೆ ಪವರ್ ಟಿವಿಗೆ ಎಕ್ಸ್​ಕ್ಲೂಸಿವ್ ಮಾಹಿತಿ ಸಿಕ್ಕಿದೆ. ಅದು ಯಾರೋ ಹೇಳಿದ ಅಂತೆ-ಕಂತೆಗಳ ಸಂತೆ ಪುರಾಣವಲ್ಲ..! ಸ್ವತಃ ತಮ್ಮಣ್ಣ ಅವರೇ ನೀಡಿರೋ ಮಾಹಿತಿ..! ‘ಸುಮಲತಾ ಅವರನ್ನು ಜೆಡಿಎಸ್​ ಕ್ಯಾಂಡಿಡೇಟ್ ಮಾಡೋ ಆಸೆಯಿತ್ತು. ಜೆಡಿಎಸ್​ ವರಿಷ್ಠರನ್ನು ಭೇಟಿ ಮಾಡಿಸೋ ಪ್ರಯತ್ನ ಮಾಡಿದ್ದೆ, ಸಂಬಂಧಿ ಮಧು ಮೂಲಕ ಮಾಡಿದ್ದ ಆ ಪ್ರಯತ್ನ ವಿಫಲವಾಯ್ತು. ಹೆಚ್​ಡಿಕೆ ಮತ್ತು ಸುಮಲತಾ ಅವರ ನಡುವೆ ಏನು ನಡೆದಿದೆಯೋ ಗೊತ್ತಿಲ್ಲ. ಹಾಗಾಗಿ ಮಾತುಕತೆ ವಿಫಲವಾಗಿದೆ’ ಎಂದಿದ್ದಾರೆ ಡಿ.ಸಿ ತಮ್ಮಣ್ಣ.

RELATED ARTICLES

Related Articles

TRENDING ARTICLES