Monday, December 23, 2024

ನಾನು ಅನುಭವಿಸುತ್ತಿರೋ ಹಿಂಸೆ ಹೇಳಿಕೊಳ್ಳುವಂತಿಲ್ಲ – ಗೆದ್ರೆ ಭದ್ರ, ಇಲ್ದಿದ್ರೆ ಅಭದ್ರ ಅಂದ್ರು ಸಿಎಂ..!

ಬೆಂಗಳೂರು : ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ‘ದೋಸ್ತಿ’ ಕಾಂಗ್ರೆಸ್ ಮೇಲೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಜೆಪಿ  ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ”ಈ ಲೋಕಸಭಾ ಚುನಾವಣೆ ನಮಗೆ ಸತ್ವ ಪರೀಕ್ಷೆ. ಎಷ್ಟು ಸ್ಥಾನ ಗೆಲ್ಲಿಸ್ತೀರೋ ಅಷ್ಟು ಸರ್ಕಾರ ಭದ್ರ. ಮೈತ್ರಿ ಸರ್ಕಾರದಲ್ಲಿ ಸೀಮಿತ ಅಧಿಕಾರವಿದೆ. ಕಾಂಗ್ರೆಸ್​ಗೆ ಬೇಡವಾದ ನಿಗಮ ಮಂಡಳಿ ಸ್ಥಾನವನ್ನು ಜೆಡಿಎಸ್​ಗೆ ಕೊಟ್ಟಿದ್ದಾರೆ. ಹೀಗಾಗಿ, ಸ್ಥಾನಮಾನ ನೀಡಿಲ್ಲ ಅನ್ನೋ ಅಸಮಾಧಾನ ಪಕ್ಷದಲ್ಲೇ ಇದೆ. ನಾನು ಅನುಭವಿಸುತ್ತಿರುವ ಹಿಂಸೆ ಹೊರಗೆ ಹೇಳಿಕೊಳ್ಳುವಂತಿಲ್ಲ” ಎಂದರು. ಒಗ್ಗಟ್ಟಿನಲ್ಲಿ ಕೆಲಸ ಮಾಡಿದರೆ ಎಂಟು ಕ್ಷೇತ್ರದಲ್ಲಿ ಅಂತ ಗೆಲ್ಲುತ್ತೇವೆ ಕಾರ್ಯಕರ್ತರನ್ನು ಹುರಿದುಂಬಿಸಿದ್ರು.

RELATED ARTICLES

Related Articles

TRENDING ARTICLES