Friday, September 20, 2024

ನಿಖಿಲ್​ ಕುಮಾರಸ್ವಾಮಿ ಹುಡುಕಾಟದಲ್ಲಿ ಬಿಜೆಪಿ..!

ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರನ್ನು ರಾಜ್ಯ ಬಿಜೆಪಿ ಹುಡುಕುತ್ತಿದೆ..! ಅರೆ, ನಿಖಿಲ್ ಅವರನ್ನು ಬಿಜೆಪಿ ಹುಡುಕುತ್ತಿರೋದು ಯಾಕೆ ಅಂತ ಆಶ್ವರ್ಯವಾಗುತ್ತೆ ಅಲ್ವಾ..? ಆಶ್ಚರ್ಯವಾದ್ರೂ ಇದು ಸತ್ಯ…ಆದ್ರೆ, ಬಿಜೆಪಿ ನಿಖಿಲ್​ ಅವರನ್ನು ಹುಡುಕುತ್ತಿರೋದು ಗಂಭೀರವಾಗಿ ಅಲ್ಲ, ವ್ಯಂಗ್ಯವಾಗಿ..!
ಹೌದು, ನಿಖಿಲ್ ಕುಮಾರಸ್ವಾಮಿ ಅವರ ಚೊಚ್ಚಲ ಚಿತ್ರ ಜಾಗ್ವಾರ್​ ಆಡಿಯೋ ಲಾಂಚ್​ ಟೈಮ್​ನಲ್ಲಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದ ವಿಡಿಯೋ ಈಗ ವೈರಲ್ ಆಗ್ತಿದೆ. ಎಲ್ಲಿದ್ದಿಯಪ್ಪಾ ಅನ್ನೋ ಮಾತು ಈಗ ಟ್ರೋಲ್ ಆಗ್ತಿದೆ.. ಇದನ್ನೇ ಇಟ್ಕೊಂಡು ಬಿಜೆಪಿ ವ್ಯಂಗ್ಯವಾಡಿದೆ. ‘ನಿಖಿಲ್​ ಎಲ್ಲಿದ್ದಿಯಪ್ಪಾ? ಅಂತ ಬಿಜೆಪಿ ಟ್ವೀಟ್​ ಮಾಡಿದೆ..! ಅಷ್ಟೇ ಅಲ್ಲದೆ ‘ಆರ್ಟ್​ ಆಫ್​ ಕ್ರೈಯಿಂಗ್ ಹಾಸನದಿಂದ ಮಂಡ್ಯಕ್ಕೆ ಶಿಫ್ಟ್ ಆಗ್ತಿದೆ’ ಎಂದೂ ವ್ಯಂಗ್ಯವಾಡಿದೆ.

RELATED ARTICLES

Related Articles

TRENDING ARTICLES