ಮಂಡ್ಯ : ಲೋಕಸಭಾ ಚುನಾವಣೆ ಡೇಟ್ ಅನೌನ್ಸ್ ಆಗಿದೆ. ಡೇಟ್ ಅನೌನ್ಸ್ಗೆ ಮುನ್ನವೇ ಕಾವೇರಿದ್ದ ಕಾವೇರಿ ಸೀಮೆಯ ರಣಕಣ ಈಗ ಮತ್ತಷ್ಟು ಕಾವೇರುತ್ತಿದೆ.
ಕಾಂಗ್ರೆಸ್ನಿಂದ ಟಿಕೆಟ್ ಸಿಗದೇ ಇದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ರೆಡಿಯಾಗಿರೋ ಸುಮಲತಾ ಅಂಬರೀಶ್ ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಫೇಸ್ಬುಕ್ನಲ್ಲಿ ‘ನನ್ನ ಜನರಿಗಾಗಿ ನನ್ನ ಹೆಜ್ಜೆ’ ಅನ್ನೋ ಸಂಕಲ್ಪ ಮಾಡಿದ್ದಾರೆ. ‘ನಾವೇನಾದರೂ ಒಳ್ಳೆಯದನ್ನು ಬಯಸಿದಾಗ. ಆ ಒಳ್ಳೆಯತನಕ್ಕೆ ಅಡೆತಡೆಗಳು ಸಹಜವಾಗಿ ಬರುತ್ತದೆ. ಆದರೆ ಅಡೆತಡೆಗಳನ್ನು ಮೆಟ್ಟಿ ಮುಂದಕ್ಕೆ ಸಾಗುವ ಶಕ್ತಿ ನನಗೆ ಮಂಡ್ಯದ ಜನ ಮತ್ತು ನನ್ನ ಅಂಬರೀಶ್ ನೀಡಿದ್ದಾರೆ’ ಎಂದು ಪೋಸ್ಟ್ವೊಂದನ್ನು ಮಾಡಿದ್ದಾರೆ.
ಇನ್ನೊಂದು ಪೋಸ್ಟ್ನಲ್ಲಿ ‘ನನಗೆ ರಾಜಕೀಯ ಕ್ಷೇತ್ರ ತುಂಬಾ ಹೊಸದು. ಇತ್ತೀಚೆಗೆಗಿನ ಬೆಳವಣಿಗೆಗಳು ಅನವಶ್ಯಕ ಟೀಕೆಗಳು ಸಣ್ಣದಾಗಿ ನನ್ನ ಮನಸ್ಸನ್ನು ಕೆಡಿಸಿದ್ದು ನಿಜ. ಮಂಡ್ಯದ ನನ್ನ ಬಂಧುಗಳ ಅಕ್ಕರೆಯ ಬೆಂಬಲ ನನನ್ನು ವಿಚಲಿತಗೊಳಿಸುವಂತೆ ಕಾಪಾಡಿತು. ಆದರೂ ನನ್ನ ಮನಸ್ಸನ್ನು ಇನ್ನಷ್ಟು ಶಕ್ತಿ ಕೊಡು ತಾಯಿ ಎಂದು ಕೇಳಿಕೊಳ್ಳಲು, ಅಮ್ಮ ಚಾಮುಂಡೇಶ್ವರಿಯನ್ನು ದರ್ಶನ ಮಾಡಿ, ತಾಯಿ ಆಶೀರ್ವಾದದೊಂದಿಗೆ ಕೋಟೆ ಆಂಜನೇಯ ಸ್ವಾಮಿ ದರ್ಶನವನ್ನು ಪಡೆದು ಬಂದೆ. ನನ್ನ ಅಂಬರೀಶ್ ಹೊರಗಡೆಯಿಂದ ಎಷ್ಟೇ ಗಟ್ಟಿ ಎಂದು ಅನಿಸಿದರೂ ಮನಸ್ಸು ಕಿರಿಕಿರಿಗೊಂಡಾಗ ತಾಯಿಯ ದರ್ಶನ ಮಾಡಿ ಮುಂದಿನ ಹೆಜ್ಜೆ ಇಡುತ್ತಿದ್ದರು. ಇಂದು ಅದೇನೋ ವಿಶೇಷ ಗೊತ್ತಿಲ್ಲ. ತಾಯಿಯ ಮುಖ ನೋಡುವಾಗ ಮಂಡ್ಯದ ಜನರ ಪ್ರೀತಿ ತಾಯಿ ಮುಖದಲ್ಲಿ ಕಂಡಂತಾಯಿತು. ಅದೇನೋ ಶಕ್ತಿ.. ” ಎಂದು ಬರೆದುಕೊಂಡಿದ್ದಾರೆ.