Monday, December 23, 2024

ರೇವಣ್ಣ ಎಚ್ಚರಿಯಿಂದ ಉತ್ತರ ಕೊಡ್ಬೇಕಿತ್ತು : ಸಿಎಂ ಕುಮಾರಸ್ವಾಮಿ

ಬೆಂಗಳೂರು : ಸುಮಲತಾ ಅವರ ಬಗ್ಗೆ ಸಚಿವ ಹೆಚ್​.ಡಿ ರೇವಣ್ಣ ಅವರು ನೀಡಿದ ಹೇಳಿಕೆಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಕ್ಷಮೆ ಯಾಚಿಸಿದ್ದಾರೆ.
ಗೃಹಕಚೇರಿಯಲ್ಲಿ ಪಲ್ಸ್​ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸುಮಲತಾ ಅವರ ಬಗ್ಗೆ ರೇವಣ್ಣ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದರು.
‘ಮಾಧ್ಯಮದವರು ಪ್ರಚೋದಿಸಿದ್ದಕ್ಕೆ ರೇವಣ್ಣ ಆ ರೀತಿ ಹೇಳಿದ್ದಾರೆ. ಆದರೆ, ಅವರು ಎಚ್ಚರಿಕೆಯಿಂದ ಉತ್ತರ ಕೊಡಬೇಕಾಗಿತ್ತು. ರೇವಣ್ಣ ಅವರ ಪರವಾಗಿ ನಾನೇ ಕ್ಷಮೆ ಕೇಳುತ್ತೇನೆ. ನಮ್ಮ ಕುಟುಂಬದವರು ಮಹಿಳೆಯರಿಗೆ, ಜನಸಾಮಾನ್ಯರಿಗೆ ಎಂದೂ ಅಗೌರವ ಸಲ್ಲಿಸಿದವರಲ್ಲ. ಯಾರ ಮನಸ್ಸಿಗಾದರೂ ನೋವಾಗಿದ್ದರೆ ರೇವಣ್ಣ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದರು.

RELATED ARTICLES

Related Articles

TRENDING ARTICLES