Monday, December 9, 2024

‘ರಾಹುಲ್​​ ಗಾಂಧಿ ಬ್ರಾಹ್ಮಣ ಹೇಗಾದ ಅನ್ನೋದಕ್ಕೆ ಸಾಕ್ಷ್ಯ ಕೊಡ್ತಾರಾ’? : ಅನಂತ್​ಕುಮಾರ್​ ಹೆಗಡೆ

ಭಟ್ಕಳ : ‘ರಾಹುಲ್​​ ಗಾಂಧಿ ಬ್ರಾಹ್ಮಣ ಹೇಗಾದ ಅನ್ನೋದಕ್ಕೆ ಸಾಕ್ಷ್ಯ ಕೊಡ್ತಾರಾ’? ಎಂದು ಕೇಂದ್ರ ಸಚಿವ ಅನಂತ್​ಕುಮಾರ್ ಹೆಗಡೆ ಮತ್ತೊಂಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಕನ್ನಡದ ಭಟ್ಕಳದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅನಂತ್​ಕುಮಾರ್ ಹೆಗಡೆಯವರು, ‘ಉಗ್ರರನ್ನ ಹೊಡೆದುರುಳಿಸಿದ್ದಕ್ಕೆ ಸಾಕ್ಷಿ ಕೇಳ್ತಾರೆ. ವೈಮಾನಿಕ ದಾಳಿಯ ಕುರಿತು ಇವರಿಗೆ ಸಾಕ್ಷ್ಯ ಬೇಕು. ಮುಸಲ್ಮಾನನ ಮಗ ಬ್ರಾಹ್ಮಣ ಹೇಗಾದ? ಗಾಂಧಿ ಹೇಗಾದ? ಮುಸಲ್ಮಾನ ತಂದೆ, ಕ್ರಿಶ್ಚಿಯನ್​ ತಾಯಿಗೆ ಹುಟ್ಟಿದ ಮಗ ಬ್ರಾಹ್ಮಣ ಹೇಗಾದ ಅನ್ನೋದಕ್ಕೆ ಸಾಕ್ಷ್ಯ ಕೊಡ್ತಾರಾ?’ ಎಂದಿದ್ದಾರೆ.
‘ಬಾಂಬ್​ ಸ್ಫೋಟದಲ್ಲಿ ರಾಜೀವ್​ ಗಾಂಧಿ ದೇಹ ಛಿದ್ರ ಛಿದ್ರವಾಗಿತ್ತು? ಆಗ ಡಿಎನ್​ಎ ಟೆಸ್ಟ್ ಮಾಡಬೇಕಾದಾಗ ಸೋನಿಯಾ ಗಾಂಧಿ ರಾಹುಲ್ ಗಾಂಧಿ ರಕ್ತ ಬೇಡ, ಪ್ರಿಯಾಂಕ ಗಾಂಧಿ ರಕ್ತ ತಗೋಳಿ ಅಂದಿದ್ದರು’ ಎಂದು ಅನಂತ್​ಕುಮಾರ್ ಹೆಗಡೆ ಅವರು ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ.

RELATED ARTICLES

Related Articles

TRENDING ARTICLES