ನವದೆಹಲಿ : ಸಚಿವ ಹೆಚ್.ಡಿ ರೇವಣ್ಣ ಸುಮಲತಾ ಅಂಬರೀಶ್ ಅವರ ವಿರುದ್ಧ ಸಚಿವ ಹೆಚ್.ಡಿ ರೇವಣ್ಣ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ರೇವಣ್ಣ ಬಾಯಿಗೆ ಬಂದ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸುಮಲತಾ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೇವಣ್ಣ, ‘ಗಂಡ ಸತ್ತು ಇನ್ನೂ 2 ತಿಂಗಳು ಕಳೆದಿಲ್ಲ. ಸಮಲತಾಗೆ ರಾಜಕೀಯ ಬೇಕಿತ್ತಾ..’? ಅಂತ ಹೇಳಿದ್ದಾರೆ. ಈ ಮೂಲಕ ಜವಬ್ದಾರಿ ಹಾಗೂ ಮಾನವೀಯತೆ ಮರೆತಿದ್ದಾರೆ ರೇವಣ್ಣ.