Thursday, April 18, 2024

ಉಗ್ರ ನೆಲೆಗಳ ಮೇಲೆ ಭಾರತದ ದಾಳಿ ಸ್ವಾಗತಿಸಿದ ಪಾಕ್ ಮಾಜಿ ಅಧ್ಯಕ್ಷ..!

ನವದೆಹಲಿ: ಪಾಕಿಸ್ತಾನದ ಜೈಷ್​-ಇ-ಮಹಮ್ಮದ್​ ಉಗ್ರ ನೆಲೆಗಳ ಮೇಲೆ ಭಾರತದ ವಾಯುಪಡೆ ನಡೆಸಿರುವ ದಾಳಿಯನ್ನು ಪಾಕ್​ನ ಮಾಜಿ ಅಧ್ಯಕ್ಷ ಪರ್ವೇಜ್​ ಮುಷರಫ್​ ಸ್ವಾಗತಿಸಿದ್ದಾರೆ.

ಪತ್ರಕರ್ತನ ಜೊತೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಈ ಕುರಿತು ಮಾತನಾಡಿದ ಅವರು, “ಭಾರತದಲ್ಲಿ ಭಯೋತ್ಪಾದನೆ ದಾಳಿಗೆ ಪಾಕಿಸ್ತಾನದ ಐಎಸ್ಐ ಕುಮ್ಮಕ್ಕು ನೀಡುತ್ತಿದೆ. ಪಾಕಿಸ್ತಾನದ ಜೆಇಎಂ ಉಗ್ರ ನೆಲೆಗಳ ಮೇಲಿನ ಭಾರತದ ದಾಳಿಯನ್ನು ಸ್ವಾಗತಿಸುತ್ತೇನೆ. ಜೆಇಎಂ ಉಗ್ರ ಶಿಬಿರಗಳ ಮೇಲೆ ಐಎಎಫ್ ದಾಳಿ ನಡೆಸಿ ಸರಿಯಾಗಿಯೇ ತಿರುಗೇಟು ನೀಡಿದೆ. 2003ರಲ್ಲಿ ಜೆಇಎಂ ಉಗ್ರರು ನನ್ನನ್ನ 2 ಬಾರಿ ಆಹ್ಮಾಹುತಿ ದಾಳಿ ಮೂಲಕ ಕೊಲ್ಲಲು ಪ್ರಯತ್ನಿಸಿದ್ದರು. ನನ್ನ ಕಾಲಾವಧಿಯಲ್ಲಿಲೂ ಪಾಕ್ ಐಎಸ್ಐ ಉಗ್ರರಿಗೆ ಸಪೋರ್ಟ್ ಮಾಡಿತ್ತು. ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನ ನಡೆಸಲು ಐಎಸ್ಐ ಬೆಂಬಲವಿದೆ” ಎಂದಿದ್ದಾರೆ.

ನಿಮ್ಮ ಅಡಳಿತಾವಧಿಯಲ್ಲಿ ಉಗ್ರ ಸಂಘಟನೆಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಉಇತ್ತರಿಸಿದ ಅವರು, “ಅಂದಿನ ಸಮಯ ಇಂದಿನಂತಿರಲಿಲ್ಲ. ಅನುಕೂಲ ಪರಿಸ್ಥಿತಿ ಇರಲಿಲ್ಲ. ಹಾಗಿದ್ದೂ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಪ್ರಯತ್ನಿಸಲಾಗಿತ್ತು” ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES