ಮಂಗಳೂರು : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೈತ್ರಿ ಪಾಳಯದಲ್ಲೀಗ ಸೀಟು ಹಂಚಿಯದ್ದೇ ಚರ್ಚೆ. ಸದ್ಯ ಅಭ್ಯರ್ಥಿ ಯಾರು ಅನ್ನೋದಕ್ಕಿಂತ ಸೀಟು ಕಾಂಗ್ರೆಸ್ಗೋ, ಜೆಡಿಎಸ್ಗೋ ಅನ್ನೋದು ಕುತೂಹಲದ ವಿಷಯ.
ಇನ್ನು ಮೂರ್ನಾಲ್ಕು ದಿನಗಳಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಅಂತ್ಯವಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ‘ಜೆಡಿಎಸ್ ಕಾರ್ಯಕರ್ತರ ಹಾಗೆ ನಮ್ಮವರು ಸೀಟು ಕೇಳ್ತಾರೆ. ನಮ್ಮ ಎಂಪಿ ಸೀಟು ಬಿಟ್ಟು ಕೊಡಲ್ಲ, ಅವರ ಸೀಟ್ ಕೇಳಲ್ಲ’ ಎಂದರು. ರಾಹುಲ್ ಗಾಂಧಿ ಮೈತ್ರಿ ಪಕ್ಷದ ಎಲ್ಲರನ್ನೂ ಭೇಟಿಯಾಗುತ್ತಿದ್ದಾರೆ. 3-4 ದಿನಗಳಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಅಂತ್ಯವಾಗುತ್ತೆ ಎಂದರು.