Friday, July 19, 2024

ಊಟಕ್ಕೆ ಕರೆದು ಎಂ.ಬಿ ಪಾಟೀಲ್​ಗೆ ‘ಫುಲ್’ ಕ್ಲಾಸ್​..!

ದಾವಣಗೆರೆ : ಗೃಹಸಚಿವ ಎಂ.ಬಿ ಪಾಟೀಲ್​ ಅವರು ಇಂದು ದಾವಣಗೆರೆ (ದಕ್ಷಿಣ) ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮನೆಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಶಾಮನೂರು ಅವರ ಪುತ್ರ ಎಸ್​.ಎಸ್ ಮಲ್ಲಿಕಾರ್ಜುನ ಅವರು ಪಾಟೀಲ್​ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ..!
‘ಚುನಾವಣೆಯಲ್ಲಿ ನಾವೇ ಸೋತು ಸುಣ್ಣಾಗಿದ್ದೀವಿ. ನೀನು ನಮ್ಮ ಅಪ್ಪನ ಬಗ್ಗೆ ಮಾತನಾಡ್ತೀಯಾ’ ಎಂದು ಮಲ್ಲಿಕಾರ್ಜುನ್ ಅವರು ಎಂ.ಬಿ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಿವಶಂಕರಪ್ಪ ಅವರು ಮಧ್ಯ ಪ್ರವೇಶಿಸಿ ಮಲ್ಲಿಕಾರ್ಜುನ್​ ಅವರನ್ನು ಸಮಾಧಾನ ಮಾಡಿದ್ದಾರೆ.
ಮಲ್ಲಿಕಾರ್ಜುನ್ ಅವರು ಕ್ಲಾಸ್ ತೆಗೆದುಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂ.ಬಿ ಪಾಟೀಲ್​, ‘ಪದೇ ಪದೇ ನಮ್ಮ ನಡುವೆ ಈ ರೀತಿ ಗಲಾಟೆಯಾಗುತ್ತಲೇ ಇರುತ್ತವೆ. ಚುನಾವಣೆಗೆ ಶಾಮನೂರು ಕುಟುಂಬದಿಂದ ನಿಲ್ಲುತ್ತಾರೆ. ನಾನು ಅವರ ಪರವಾಗಿ ಪ್ರಚಾರಕ್ಕೆ ಬರುತ್ತೇನೆ. ಎಸ್.ಎಸ್.ಮಲ್ಲಿಕಾರ್ಜುನ್, ನಾನು ಸಹೋದರರು’ ಎಂದಿದ್ದಾರೆ.

RELATED ARTICLES

Related Articles

TRENDING ARTICLES