Tuesday, October 15, 2024

ಶಾಮನೂರು ಕುಟುಂಬಕ್ಕೆ ಟಿಕೆಟ್ ಕನ್ಫರ್ಮ್..!

ದಾವಣಗೆರೆ : ಲೋಕಸಭಾ ಚುನಾವಣೆ ಸಮೀಸುತ್ತಿದ್ದಂತೆ ಟಿಕೆಟ್ ಲೆಕ್ಕಾಚಾರ ಜೋರಾಗಿದೆ. ಮುಖ್ಯವಾಗಿ ಮೈತ್ರಿ ಟಿಕೆಟ್​ ಹಂಚಿಕೆ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಇದೀಗ ದಾವಣಗೆರೆ ಲೋಕಸಭಾ ಟಿಕೆಟ್​ ಶಾಮನೂರು ಅವರ ಕುಟುಂಬಕ್ಕೆ ಕನ್ಫರ್ಮ್ ಆಗಿದೆ.
ಗೃಹಸಚಿವ ಎಂ.ಬಿ ಪಾಟೀಲ್ ಅವರು ಈ ವಿಷಯವನ್ನು ಕನ್ಫರ್ಮ್ ಮಾಡಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ ಪಾಟೀಲ್ ಅವರ ನಡುವೆ ಸಾಕಷ್ಟು ಜಟಾಪಟಿ ನಡೆದಿತ್ತು. ಇಬ್ಬರು ನಾಯಕರು ಹಲವು ಬಾರಿ ಮಾತಿನ ಚಕಮಕಿ ನಡೆಸಿದ್ದರು. ಇದೀಗ ಹಳೆಯ ದ್ವೇಷವನ್ನು ಮರೆತು ಪಾಟೀಲ್ ಅವರು ಶಾಮನೂರು ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು.
ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್​.ಎಸ್​ ಮಲ್ಲಿಕಾರ್ಜುನ ಅವರು ಸ್ಪರ್ಧಿಸುತ್ತಾರೆ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.  ಕಳೆದ ವಿಧಾನಸಭಾ ಚುನಾವಣೆಯಲ್ಲಿ (ದಾವಣಗೆರೆ ಉತ್ತರ) ಸೋತಿದ್ದ ಎಸ್​.ಎಸ್​ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್​ ನೀಡುವಂತೆ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಅಕಸ್ಮಾತ್ ಅವರ ನಾನು ಸ್ಪರ್ಧಿಸಲ್ಲ ಎಂದರೆ ಶಾಸಕ (ದಾವಣಗೆರೆ ದಕ್ಷಿಣ) ಶಿವಶಂಕರಪ್ಪ ಅವರು ಲೋಕ ಸಮರಕ್ಕೆ ಇಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ದಾವಣಗೆರೆ ಲೋಕಸಭಾ ಚುನಾವಣಾ ಟಿಕೆಟ್ ಶಾಮನೂರು ಕುಟುಂಬಕ್ಕೆ ಕನ್ಫರ್ಮ್​ ಆಗಿದೆ.

RELATED ARTICLES

Related Articles

TRENDING ARTICLES