Thursday, May 30, 2024

ಅಪ್ಪಾಜಿ ಮೇಲಿನ ಅಭಿಮಾನ, ಸುಮಲತಾ ಪರ ನಿಂತ ‘ಯಜಮಾನ’..!

ಮಂಡ್ಯ : ಲೋಕಸಭಾ ಚುನಾವಣೆ ಸಮೀಸುತ್ತಿದ್ದು, ಮಂಡ್ಯದಲ್ಲಿ ಸ್ಟಾರ್ ವಾರ್ ಫಿಕ್ಸ್ ಆಗಿದೆ. ಮೈತ್ರಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್​ನಿಂದ ಟಿಕೆಟ್​ ಸಿಗದೇ ಇದ್ರೂ ತಾನು ಸ್ಪರ್ಧಿಸೋದು ಪಕ್ಕಾ ಅಂದಿರುವ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸೋದು ಬಹುತೇಕ ಕನ್ಫರ್ಮ್.
ಇದೀಗ ಸುಮಲತಾ ಅಂಬರೀಶ್ ಅವರ ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ಯಾಟಿಂಗ್ ಮಾಡಿದ್ದಾರೆ. ಸುಮಲತಾ ಅವರು ಕರೆದರೆ ಪ್ರಚಾರಕ್ಕೆ ಹೋಗಲು ಸಿದ್ಧ ಎಂದು ದರ್ಶನ್ ಹೇಳಿದ್ದಾರೆ. ಈ ಮೂಲಕ ಮಂಡ್ಯ ರಣಕಣದಲ್ಲಿ ಸುಮಲತಾ ಅವರಿಗೆ ‘ಸಾರಥಿ’ಯಾಗಲು ದರ್ಶನ್ ರೆಡಿಯಾಗಿದ್ದಾರೆ.
‘ಈ ಹಿಂದೆ ಅಪ್ಪಾಜಿ (ಅಂಬರೀಶ್) ಅವರಿದ್ದಾಗಲೂ ಪ್ರಚಾರಕ್ಕೆ ಹೋಗ್ತಿದ್ದೆ. ಅಪ್ಪಾಜಿ ಪರ ಪ್ರಚಾರಕ್ಕೆ ಹೋಗಿದ್ದೀನಿ. ಈಗ್ಲೂ ಹೋಗ್ತೀನಿ. ಸುಮಲತಾ ಅವರ ಪರ ಪ್ರಚಾರ ಮಾಡೋದು ನನ್ನ ಕರ್ತವ್ಯ’ ಎಂದಿದ್ದಾರೆ ದರ್ಶನ್.

RELATED ARTICLES

Related Articles

TRENDING ARTICLES