Monday, June 24, 2024

ಸಿಸಿಎಲ್ : ಸ್ಯಾಂಡಲ್​​ವುಡ್​ ಶುಭಾರಂಭ

ಚಂಡೀಗಢ: ಸೆಲಬ್ರಿಟಿ‌ ಕ್ರಿಕೆಟ್ ಲೀಗ್ ( ಸಿಸಿಎಲ್) ನಲ್ಲಿ ಸ್ಯಾಂಡಲ್​​ವುಡ್​ನ ಕರ್ನಾಟಕ ಬುಲ್ಡೋಜರ್ಸ್ ಶುಭಾರಂಭ ಮಾಡಿದೆ. ಪಂಜಾಬ್ ಡೆರ್ ಶೇರ್ ವಿರುದ್ಧ ನಡೆದ ಮೊದಲ ಮ್ಯಾಚ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ 9 ವಿಕೆಟ್​ಗಳ ಜಯ ದಾಖಲಿಸಿದೆ‌.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದಿತ 10 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿತು. ರಾಜೀವ್‌33, ಸೋನು ಸೂದ್ 29 ರನ್ ಗಳಿಸಿ ಮಿಂಚಿದ್ರು. ಕರ್ನಾಟಕದ ಪರ ಜೆಕೆ, ಪ್ರಸನ್ನ ಮತ್ತು ಚಂದನ್ ತಲಾ 1ವಿಕೆಟ್ ಪಡೆದುಕೊಂಡ್ರು.

ಗುರಿ ಬೆನ್ನಟ್ಟಿದ ಕರ್ನಾಟಕ ಕ್ಯಾಪ್ಟನ್ ಪ್ರದೀಪ್ ಅವರ ಅಜೇಯ 34 , ಡಾರ್ಲಿಂಗ್ ಕೃಷ್ಣ ಅವರ 14 ರನ್ ಗಳ ನೆರವಿನಿಂದ ಕೇವಲ 5.4 ಓವರ್ ಗಳಲ್ಲಿ ಗೆಲುವಿನ ದಡ ಸೇರಿತು. ಗೆಲುವಿನ ಸಮೀಪದಲ್ಲಿ ಕೃಷ್ಣ ಪೆವಿಲಿಯನ್ ಸೇರಿದ್ರು. ನಾಯಕ ಪ್ರದೀಪ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

RELATED ARTICLES

Related Articles

TRENDING ARTICLES