Thursday, January 23, 2025

2ನೇ ಮ್ಯಾಚ್​ನಲ್ಲೂ ಕರ್ನಾಟಕ ಬುಲ್ಡೋಜರ್ಸ್​ಗೆ ಜಯ

ಚಂಡೀಗಢ : ಸೆಲಬ್ರಿಟಿ ಕ್ರಿಕೆಟ್​ ಲೀಗ್​ನ (ಸಿಸಿಎಲ್​) 2ನೇ ಪಂದ್ಯದಲ್ಲೂ ಕರ್ನಾಟಕ ಬುಲ್ಡೋಜರ್ಸ್ ಗೆಲುವು ಸಾಧಿಸಿದ್ದು, ಸೆಮಿಫೈನಲ್ ಪ್ರವೇಶಿಸೋದು ಬಹುತೇಕ ಖಚಿತವಾಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಗೆದ್ದಿದ್ದ ಪ್ರದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಇಂದು ನಡೆದ 2 ನೇ ಮ್ಯಾಚ್​ನಲ್ಲಿ ತೆಲುಗು ವಾರಿಯರ್ಸ್​ ವಿರುದ್ಧ 54ರನ್​ಗಳ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ನಿಗಧಿತ 10 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 122 ರನ್​ಗಳನ್ನು ಗಳಿಸಿತು. ಭಜರಂಗಿ ಲೋಕಿ ಮತ್ತು ರಾಜೀವ್ ತಲಾ 30ರನ್​ಗಳನ್ನು ಕೃಷ್ಣ ಅವರು 16ರನ್​ಗಳನ್ನು ಬಾರಿಸಿ ಬೃಹತ್ ಮೊತ್ತಕ್ಕೆ ನೆರವಾದರು. ಗುರಿ ಬೆನ್ನತ್ತಿದ ತೆಲುಗು ವಾರಿಯರ್ಸ್ ಕೇವಲ 68ರನ್​ಗಳನ್ನು ಗಳಿಸಲಷ್ಟೇ ಶಕ್ತವಾಗಿ ಸೋಲಪ್ಪಿಕೊಂಡಿತು.

RELATED ARTICLES

Related Articles

TRENDING ARTICLES