Thursday, May 30, 2024

ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಪಾಪಿ ಪಾಕ್​ಗೆ ಅಮೆರಿಕ ಎಚ್ಚರಿಕೆ..!

ವಾಷಿಂಗ್ಟನ್​: ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆಗಳ ಮೇಲೆ ಭಾರತ ಏರ್ ಸ್ಟ್ರೈಕ್​ ನಡೆಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಕ್​ಗೆ ಎಚ್ಚರಿಸಿದ್ದಾರೆ. ಹಾಗೆಯೇ ಎರಡು ದೇಶಗಳ ನಡುವಿನ ಸಂಬಂಧ ಬಿಗಾಡಾಯಿಸುತ್ತಿದ್ದು ಎರಡೂ ದೇಶಗಳೂ ಸೈನಿಕ ಕಾರ್ಯಾಚರಣೆಗಳಿಂದ ಹಿಂದೆ ಸರಿಯಬೇಕು ಅಂತ ಹೇಳಿದ್ದಾರೆ.

“ಸೈನಿಕ ಕಾರ್ಯಾಚರಣೆಳನ್ನು ತಪ್ಪಿಸಿ ಎರಡೂ ದೇಶಗಳ ನಡುವೆ ಸೃಷ್ಟಿಯಾಗಿರುವ ಬಿಗುವಿನ ವಾತಾವರಣ ದೂರ ಮಾಡಿ. ಪಾಕಿಸ್ಥಾನ ಆದಷ್ಟು ಬೇಗ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ” ಅಂತ ಅಮೆರಿಕ ಕಾರ್ಯದರ್ಶಿ ಮೈಕ್​ ಪಾಂಪೆ ಹೇಳಿದ್ದಾರೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವಾರಜ್​ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ ಅವರೊಂದಿಗೆ ಮಾತನಾಡಿದ ಮೈಕ್​ ಅವರು, “ಭಾರತ ಮತ್ತು ಪಾಕಿಸ್ತಾನ ಶಾಂತಿಯುತವಾಗಿ ಹಿಂದೆ ಸರಿಯಬೇಕು. ಹಾಗೇ ಪರಿಸ್ಥಿತಿ ಇನ್ನಷ್ಟು ಕೆಡಲು ಬಿಡಬಾರದು ಎಂಬುದು ನಮ್ಮ ಆಶಯ. ಎರಡೂ ದೇಶಗಳ ಪ್ರಧಾನಿಯವರು ಪರಸ್ಪರ ದಾಳಿ ಮಾಡುವುದನ್ನು ತಪ್ಪಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದಕ್ಕೆ ಆದ್ಯತೆ ನೀಡಿ” ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES