ಚಿತ್ರದುರ್ಗ : ಭಾರತದ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ 2 ಮತ್ತು ಪಾಕಿಸ್ತಾನ ಗಡಿಯ 1 ಉಗ್ರ ನೆಲೆಯ ದಾಳಿ ಮಾಡಿದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ 22 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ತೀವಿ ಅನ್ನೋ ಮೂಲಕ ರಾಜಕೀಯ ರೂಪವನ್ನೂ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ನೆಲೆಯನ್ನು ನಾಶ ಮಾಡಿರುವುದರಿಂದ ದೇಶದಲ್ಲಿ ಮೋದಿ ಪರ ಅಲೆ ಎದ್ದಿದೆ. ಭಾರತೀಯ ಜನತಾ ಪಾರ್ಟಿ ಕಡೆಗಿನ ಗಾಳಿ ದಿನೇ ದಿನೇ ಜಾಸ್ತಿ ಬೀಸುತ್ತಿದೆ. ಯುವಕರು ಕುಣಿದು ಕುಪ್ಪಳಿಸುತ್ತಿದ್ದಾರೆ. ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಒಂದು ತೊಟ್ಟು ರಕ್ತಕ್ಕೂ ಸೇಡನ್ನೂ ತೀರಿಸಿಕೊಳ್ಳುತ್ತೇನೆ ಎಂದಿದ್ದ ಮೋದಿ ಅವರು ಅದನ್ನು ಮಾಡಿ ತೋರಿಸಿದ್ದಾರೆ. ಇಡೀ ದೇಶ, ಸರ್ವಪಕ್ಷಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ” ಎಂದಿದ್ದಾರೆ.