ಹಾವೇರಿ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ‘ಲೋಕ’ ಗೆಲ್ಲುವ ತನಕ ಮನೆಗೆ ಹೋಗಲ್ಲ ಅಂತ ಶಪಥ ಮಾಡಿದ್ದಾರೆ..!
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಮುಗಿಯುವರೆಗೂ ಮನೆಗೆ ಹೋಗಲ್ಲ. 22 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವವರೆಗೂ ಮನೆ ಸೇರಲ್ಲ’ ಎಂದರು.
‘ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ..? ಮೋದಿ ಪ್ರಧಾನಿ ಆಗುವುದೂ ಅಷ್ಟೇ ಸತ್ಯ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಸಾಟಿ ಯಾರೂ ಇಲ್ಲ’ ಅಂತ ಹೇಳಿದ್ರು. ನಮ್ಮ ತಪ್ಪಿನಿಂದ ಬಹಳ ಹತ್ತಿರದಲ್ಲಿ ರಾಜ್ಯದಲ್ಲಿ ಅಧಿಕಾರ ವಂಚಿತರಾದೆವು ಅಂತ ಅಭಿಪ್ರಾಯಪಟ್ಟರು.