ಹೊಸಪೇಟೆ : ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ತಲೆಮರೆಸಿಕೊಂಡಿರೋ ಕಂಪ್ಲಿ ಎಂಎಲ್ಎ ಜೆ.ಎನ್ ಗಣೇಶ್ ಮಂತ್ರಿ ಆಗ್ತಾರಂತೆ..! ಹೀಗಂತ ಹೇಳಿದ್ದು, ಶಾಸಕ ರಮೇಶ್ ಜಾರಕಿಹೊಳಿ.
ಗಣೇಶ್ ಅವರ ಫ್ಯಾಮಿಲಿಯನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ, ”ರಾಜಕಾರಣ ನಿಂತ ನೀರಲ್ಲ. ಏನ್ ಬೇಕಾದ್ರೂ ಆಗ್ಬಹುದು. ಕಂಪ್ಲಿ ಶಾಸಕ ಗಣೇಶ್ ಅವರು ಮಂತ್ರಿ ಆಗಲಿದ್ದಾರೆ. ಸಚಿವ ಸ್ಥಾನಗಳಿಲ್ಲದಿದ್ರೆ ಇದ್ದವರು ತ್ಯಾಗ ಮಾಡ್ಬೇಕು” ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.