Monday, December 23, 2024

ರನೌಟ್​ ಆದ ಸಿಟ್ಟಿನಲ್ಲಿ ಬ್ಯಾಟ್​ನಿಂದ ಚೇರ್​ಗೆ ಹೊಡೆದ ಫಿಂಚ್..!

ಮೇಲ್ಬೋರ್ನ್​ : ಆಟ ಅಂದ್ರೆ ಸೋಲು-ಗೆಲುವು ಇದ್ದಿದ್ದೇ.. ಆಟಗಾರ ಅಂದ್ರೂ ಅಷ್ಟೇ ಕೆಲವೊಮ್ಮೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪರ್ಫಾರ್ಮೆನ್ಸ್ ಕೊಡಬಹುದು, ಮತ್ತೆ ಕೆಲವೊಮ್ಮೆ ಫೆಲ್ಯೂರ್ ಆಗಬಹುದು. ಗೆದ್ದಾಗ ಸಂಭ್ರಮಿಸ್ತೀವಿ.. ಸೋತಾಗ ಅದೇ ರೀತಿ ಕೆಟ್ಟದಾಗಿ ರಿಯಾಕ್ಟ್ ಮಾಡೋದು ಕೂಡ ಇದ್ದಿದ್ದೇ..!
ಇನ್ನು ಕ್ರಿಕೆಟ್ ವಿಷ್ಯಕ್ಕೆ ಬಂದ್ರೆ ಬ್ಯಾಟ್ಸ್​ಮನ್ ಒಳ್ಳೆಯ ಇನ್ನಿಂಗ್ಸ್ ಕಟ್ಟುತ್ತಿರುವಾಗ, ತಂಡಕ್ಕೆ ಆಧಾರವಾಗಿ ನಿಂತು ಬ್ಯಾಟ್​ ಬೀಸುತ್ತಿರುವಾಗ ಅನ್​ ಎಸ್ಪೆಕ್ಟೆಡ್​ ರೀತಿಯಲ್ಲಿ ಔಟ್ ಆಗಿ ಪೆವಿಲಿಯನ್ ಸೇರೋದು ಕೂಡ ಪಾರ್ಟ್​ ಆಫ್ ದಿ ಗೇಮ್ ಅಂತಲೇ ಹೇಳಬಹುದು. ಹೀಗೆ ತನ್ನದಲ್ಲದ ತಪ್ಪಿಗೆ ರನ್​ ಔಟ್ ಆದ ಆಸ್ಟ್ರೇಲಿಯಾ ಬ್ಯಾಟ್ಸ್​ನ್ ಆ್ಯರೋನ್ ಫಿಂಚ್ ತನ್ನ ಕೋಪವನ್ನು ಚೇರ್ ಮೇಲೆ ತೀರಿಸಿಕೊಂಡಿದ್ದಾರೆ.
2019ನೇ ಸಾಲಿನ ಬಿಗ್ ಬಾಷ್ ಲೀಗ್​ನ ಫೈನಲ್ ವೇಳೆ ಈ ಘಟನೆ ನಡೆದಿದೆ. ಮೇಲ್ಬೋರ್ನ್​ ಸ್ಟಾರ್ಸ್ ಮತ್ತು ಮೆಲ್ಬೋರ್ನ್​ ರೆನೆಗೇಡ್ಸ್ ತಂಡಗಳ ನಡುವೆ ನಡೆದ ಮ್ಯಾಚ್​ನಲ್ಲಿ ರೆನೆಗೇಡ್ಸ್ ತಂಡದ ಕ್ಯಾಪ್ಟನ್ ಫಿಂಚ್ ಈ ವರ್ತನೆ ತೋರಿದ್ದಾರೆ. ಅವರು ಮತ್ತು ಕ್ಯಾಮರೂನ್ ವೈಟ್​ ಸ್ಕ್ರೀಸ್​ನಲ್ಲಿದ್ದರು. ಎದುರಾಳಿ ತಂಡದ ಬೌಲರ್ ಜಾಕ್ಸನ್ ಬರ್ಡ್ ಎಸೆದ ಬಾಲ್ ಅನ್ನು ವೈಟ್​ ನೇರವಾಗಿ ಬಾರಿಸಿದ್ರು. ಆ ಬಾಲ್ ಬರ್ಡ್ ಕಾಲಿಗೆ ತಾಗಿ ಎದುರಿನ ವಿಕೆಟ್, ಅಂದ್ರೆ ಫಿಂಚ್ ಇದ್ದ ಬದಿಯ ವಿಕೆಟ್​ಗೆ ಬಡಿಯಿತು. ಆಗ ಸ್ಕ್ರೀಸ್​ ಬಿಟ್ಟಿದ್ದ ಫಿಂಚ್ ರನ್​ಔಟ್ ಆಗಿ ಪೆವಿಲಿಯನ್​ ಸೇರ ಬೇಕಾಯಿತು.
ಹೀಗೆ ರನ್​ ಔಟ್ ಆದ ಫಿಂಚ್ ಪೆವಿಲಯನ್ ಕಡೆ ಹೆಜ್ಜೆ ಹಾಕಿದ್ರು. ಅಲ್ಲಿದ್ದ ಚೇರ್ ಮೇಲೆ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದ್ರು..! ಬ್ಯಾಟ್​ನಿಂದ ಚೇರ್​ಗೆ ಬಾರಿಸಿದ್ರು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇನ್ನು ಫಿಂಚ್ ನೇತೃತ್ವದ ರೆನೆಗೇಡ್ಸ್ ತಂಡವೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ

RELATED ARTICLES

Related Articles

TRENDING ARTICLES