ನವದೆಹಲಿ : ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್) ಪ್ರಸಾರಕ್ಕೆ ರಿಲಯನ್ಸ್ ಬ್ರೇಕ್ ಹಾಕಿದೆ.
ಪುಲ್ವಾಮ ದಾಳಿ ಹಿನ್ನೆಲೆಯಲ್ಲಿ ಪಾಕ್ ವಿರುದ್ಧ ಐಎಂಜಿ ರಿಲಯನ್ಸ್ ಈ ನಡೆಯನ್ನು ಅನುಸರಿಸಿದೆ. ಐಪಿಎಲ್ನಂತೆ ಪಾಕಿಸ್ತಾನದ ಕ್ರಿಕೆಟ್ ಲೀಗ್ ಈ ಪಿಎಸ್ಎಲ್. ಸದ್ಯ ದುಬೈನಲ್ಲಿ ಈ ಟೂರ್ನಿ ನಡೆಯುತ್ತಿದೆ. ಟೂರ್ನಿಯ ಪ್ರಸಾರದ ಹಕ್ಕನ್ನು ಐಎಂಜಿ ರಿಲಯನ್ಸ್ ಹೊಂದಿತ್ತು. ಆದರೆ, ಇದೀಗ ರಿಲಯನ್ಸ್ ಪ್ರಸಾರಕ್ಕೆ ಬ್ರೇಕ್ ಹಾಕಿದ್ದು, ಹೊಸ ಬ್ರಾಡ್ಕಾಸ್ಟ್ ಪ್ರಡ್ಯೂಸರ್ಗಾಗಿ ಹುಡುಕಾಟ ನಡೆಸುತ್ತಿದೆ. ಆದರೆ, ಪ್ರೊಡ್ಯಸೂರ್ ಅಷ್ಟು ಬೇಗ ಸಿಗೋದು ಕಷ್ಟ. ಆದ್ದರಿಂದ ಈ ಬಾರಿ ಪಿಎಸ್ಎಲ್ ಮ್ಯಾಚ್ಗಳು ನಡೆಯೋದು ಅನುಮಾನ. ಇದರಿಂದ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ಗೆ ಭಾರೀ ನಷ್ಟವಾಗಿದೆ.
ಪಾಕ್ ಸೂಪರ್ ಲೀಗ್ ಪ್ರಸಾರಕ್ಕೆ ರಿಲಯನ್ಸ್ ಬ್ರೇಕ್..!
TRENDING ARTICLES