Monday, December 23, 2024

2022ರ ಫಿಫಾ ವರ್ಲ್ಡ್​ಕಪ್​ಗೆ ಕಪಿಲ್-ಧೋನಿಗೆ ಆಹ್ವಾನ

ಮುಂಬೈ : ಕತಾರ್​ನಲ್ಲಿ ನಡೆಯಲಿರೋ 2022ರ ಫುಟ್ಬಾಲ್​ ವರ್ಲ್​ಕಪ್​ಗೆ ಭಾರತಕ್ಕೆ ಕ್ರಿಕೆಟ್ ವಿಶ್ವಕಪ್ ತಂದುಕೊಟ್ಟ ಕ್ಯಾಪ್ಟನ್​ಗಳಾದ ಕಪಿಲ್​ ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರಿಗೆ ಆಹ್ವಾನವನ್ನು ನೀಡಲಾಗಿದೆ.
ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಫಿಫಾ ವಿಶ್ವಕಪ್​ ಕಳೆದ ವರ್ಷ ರಷ್ಯಾದಲ್ಲಿ ನಡೆದಿತ್ತು. ಫ್ರಾನ್ಸ್​ ಚಾಂಪಿಯನ್​ ಆಗಿತ್ತು. 2022ರಲ್ಲಿ ಅರಬ್​ ರಾಷ್ಟ್ರದ ಕತಾರ್​ನಲ್ಲಿ ನಡೆಯಲಿದೆ. ಈ ವಿಶ್ವಕಪ್​ಗೆ 1983ರಲ್ಲಿ ಭಾರತಕ್ಕೆ ಕ್ರಿಕೆಟ್ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್​ದೇವ್ ಮತ್ತು 2011ರಲ್ಲಿ ವರ್ಲ್ಡ್​​ಕಪ್ ತಂದುಕೊಟ್ಟ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡಗಳನ್ನು ಫಿಫಾಕ್ಕೆ ಆಹ್ವಾನಿಸಲಾಗಿದೆ. ಟೂರ್ನಿಯ ಸಿಇಒ ನಾಸೀರ್​ ಅಲ್​ ಖಾತರ್ ಈ ಟೀಮ್​ಗಳಿಗೆ ಆಹ್ವಾನ ನೀಡಿದ್ದಾರೆ.
ಭಾರತದ ಕ್ರಿಕೆಟಿಗರನ್ನು ಆಹ್ವಾನಿಸಿದ್ದು, ಅವರ ಆಗಮನದಿಂದ ಟೂರ್ನಿಗೆ ಮೆರಗು ಹೆಚ್ಚಲಿದೆ. ವಿಶೇಷವಾಗಿ ಕಪಿಲ್ ದೇವ್ ಮತ್ತು ಧೋನಿ ಅವರಿಗೆ ಆಹ್ವಾನ ನೀಡಲಾಗಿದೆ ಅಂತ ಖಾತರ್ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES