Friday, September 20, 2024

ರೇಣುಕಾಚಾರ್ಯ ಕೊಟ್ಟ ಸಿಡಿಯಲ್ಲಿ ಏನಿದೆ ಗೊತ್ತಾ?

ಬೆಂಗಳೂರು : ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಸಿಡಿಸಿದ ಆಡಿಯೋ ಬಾಂಬ್​ಗೆ ಪ್ರತಿಯಾಗಿ ಬಿಜೆಪಿ ಸಿಡಿ ಅಸ್ತ್ರವನ್ನು ಪ್ರಯೋಗಿಸಿದೆ.
ಶಾಸಕ ರೇಣುಕಾಚಾರ್ಯ ಸದನದಲ್ಲಿ ಸಿಡಿಯೊಂದನ್ನು ಪ್ರಸ್ತಾಪಿಸಿ ಇದು 40 ಕೋಟಿ ರೂಪಾಯಿಯ ಸಿಡಿ. ಈ ಬಗ್ಗೆಯೂ ಚರ್ಚೆಯಾಗಲಿ ಅಂತ ಹೇಳಿ ಸಿಡಿಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನೀಡಿದ್ರು.
ಬಳಿಕ ಪವರ್ ಟಿವಿ ಜೊತೆ ಮಾತನಾಡಿದ ರೇಣುಕಾಚಾರ್ಯ, ”ಕುಮಾರಸ್ವಾಮಿ ಅವರು ತಾನೇ ಆಡಿಯೋ ಮಾಡಿಸಿದ್ದು ಎಂದು ಹೇಳಿದ್ದಾರೆ. ಹಾಗಾಗಿ ಆಡಿಯೋ ಮಾಡಿಸಿದ್ದೇ ಮೊದಲ ತಪ್ಪು. ಸಭಾಧ್ಯಕ್ಷರ ಬಗ್ಗೆ ಗೌರವವಿದೆ. ಅವರ ಗೌರವ ಕಾಪಾಡೋದು ನಮ್ಮೆಲ್ಲರ ಕರ್ತವ್ಯ. ಆದರೆ, ಅವರು ಈ ಆಡಿಯೋ ವಿಷಯವನ್ನು ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬಹುದಿತ್ತು. ಸರ್ಕಾರಕ್ಕೆ ನೀಡಿರೋದು ಸರಿಯಲ್ಲ. ಮುಖ್ಯಮಂತ್ರಿಗಳಿಗೆ ನೈತಿಕತೆ ಇಲ್ಲ”ಎಂದರು.
”ಹಿಂದೆ ಕುಮಾರಸ್ವಾಮಿಯವರು ಜೆಡಿಎಸ್​ 40 ಜನ ಶಾಸಕರಿಗೆ ತಲಾ 1 ಕೋಟಿ ರೂ ಕೊಡಬೇಕು ಎಂದು ಹೇಳಿರುವ ಆಡಿಯೋ ಇದೆ. ಕಾರ್ಯಕರ್ತರು ಮತ್ತು ಮುಖಂಡರು ಕುಮಾರಸ್ವಾಮಿ ಅವರ ಬಳಿ ಬಂದಾಗ ನಂಗೆ ಹಣ ಬೇಕು ನಾನು ಏನು ಮಾಡೋಕೆ ಆಗಲ್ಲ. ಕಷ್ಟದಲ್ಲಿದ್ದೇನೆ. ಒಬ್ಬೊಬ್ಬ ಶಾಸಕರು ಒಂದೊಂದು ಕೋಟಿ ಕೊಡಬೇಕು ಅಂದಿದ್ದು ತಪ್ಪಲ್ವಾ? ಕುಮಾರಸ್ವಾಮಿ ಅವರು ಬ್ಲಾಕ್​ ಮೇಲ್ ರಾಜಕಾರಣ ಮಾಡ್ತಿದ್ದಾರೆ. ಸ್ವತಃ ಸಿಎಂ ಅವರೇ ಆರೋಪಿ ಸ್ಥಾನದಲ್ಲಿರೋದ್ರಿಂದ ಎಸ್​ಐಟಿ ತನಿಖೆಯಲ್ಲಿ ನಂಬಿಕೆ ಇಲ್ಲ. ಸ್ವತಃ ಅವರ ಅಣ್ಣನ ಮಗನೇ ಅವರನ್ನು ಸೂಟ್​ಕೇಸ್​ ಪಾರ್ಟಿ ಅಂದಿದ್ದರು ಎಂದು ಹೇಳಿದ್ರು.

RELATED ARTICLES

Related Articles

TRENDING ARTICLES