ಬೆಂಗಳೂರು : ವಿಧಾನ ಸಭಾ ಕಲಾಪದಲ್ಲಿ ‘ಆಡಿಯೋ ವಾರ್’ ನಡೆಯಿತು. ಗುರುಮಿಠ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಜೊತೆ ಯಡಿಯೂರಪ್ಪ ಅವರು ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ವಿಚಾರದ ಕುರಿತು ಪ್ರಸ್ತಾಪಿಸಿದ ಸ್ಪೀಕರ್ ರಮೇಶ್ ಕುಮಾರ್ ‘ಚಾರಿತ್ರ್ಯವಧೆ ಸಾವಿಗಿಂತ ಕ್ರೂರ’ ಎಂದು ಭಾವುಕರಾಗಿ ನುಡಿದ್ರು.
ಮುಖ್ಯಮಂತ್ರಿಯವರು ಶುಕ್ರವಾರ ನಂಗೊಂದು ಆಡಿಯೋ ಕಳುಹಿಸಿದ್ರು. ಅದರಲ್ಲಿ ನನ್ನ ಹೆಸರು ಮತ್ತು ಪ್ರಧಾನಿ ಅವರ ಹೆಸರನ್ನೂ ಪ್ರಸ್ತಾಪಿಸಲಾಗಿತ್ತು. ನಂಗೆ 50 ಕೋಟಿ ರೂ ನೀಡಿರೋದಾಗಿ ಆಡಿಯೋದಲ್ಲಿ ಹೇಳಿದ್ದಾರೆ. ನಾನು ಶಾಸನಸಭೆಗೆ ಗೌರವಪೂರ್ವಕವಾಗಿ ಆಯ್ಕೆಯಾಗಿದ್ದೇನೆ. ನನ್ನ ಮೇಲೆ ಇಂಥಾ ಆಪಾದನೆ ಹಿಂದೆಂದೂ ಬಂದಿರಲಿಲ್ಲ. ನಾನು ದುಡ್ಡು ತೆಗೆದುಕೊಂಡಿದ್ದೇನೆ ಅಂತ ಹೇಳಿರುವುದರಿಂದ ನೋವುಂಟಾಗಿದೆ. ‘ಚಾರಿತ್ರ್ಯವಧೆ ಸಾವಿಗಿಂತ ಹೆಚ್ಚು ಕ್ರೂರ ‘ಎಂದರು.