Friday, September 20, 2024

ಅತೃಪ್ತ ಶಾಸಕರನ್ನು ಅನರ್ಹಗೊಳಿಸೋದು ನಿಶ್ಚಿತ : ಸಿದ್ದರಾಮಯ್ಯ

ಹುಬ್ಬಳ್ಳಿ : ಅತೃಪ್ತ ಶಾಸಕರಿಗೆ ಬಿಸಿಮುಟ್ಟಿಸಲು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರಾಗಿರೋ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನಕ್ಕೆ ಬಾರದ 4 ಮಂದಿ ಶಾಸಕರನ್ನು ಅನರ್ಹಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕಾಂಗ್ರೆಸ್​ನಿಂದ ಈ ಶಾಸಕರನ್ನು ಅನರ್ಹಗೊಳಿಸೋದು ನಿಶ್ಚಿತ ಅಂತ ಹೇಳಿದ್ದಾರೆ.
ಗೈರಾದ ಶಾಸಕರ ಬಗ್ಗೆ ಕ್ರಮಕ್ಕೆ ಸ್ಪೀಕರ್​ಗೆ ಮನವಿ ಮಾಡುವುದಾಗಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಇದರಿಂದ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್ , ಮಹೇಶ್ ಕುಮಟಹಳ್ಳಿ ಮತ್ತು ಬಿ.ನಾಗೇಂದ್ರ ಅವರಿಗೆ ಸಂಕಷ್ಟ ಎದುರಾಗಿದೆ.

RELATED ARTICLES

Related Articles

TRENDING ARTICLES