ಬೆಂಗಳೂರು : ಶಾಸಕ ರೇಣುಕಾಚಾರ್ಯ ಅವರ ಮೇಲೆ ಸಚಿವ ಹೆಚ್.ಡಿ ರೇವಣ್ಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ರೇವಣ್ಣ ಅವರು ಯಡಿಯೂರಪ್ಪ ಅವರ ಮನೆಗೆ ಹೋಗಿದ್ರು ಎಂಬ ರೇಣುಕಾಚಾರ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ರೇವಣ್ಣ, ”ಅವನ್ಯಾವನೋ ರೇಣುಕಾಚಾರ್ಯ 420. ಅವನ ಮಾತಿಗೆಲ್ಲ ನಾನ್ಯಾಕೆ ಉತ್ತರಿಸಲಿ. ನಾನು ಯಡಿಯೂರಪ್ಪ ಮನೆಗೆ ಯಾವತ್ತೂ ಹೋಗಿಲ್ಲ. ಆ ಪ್ರಶ್ನೆ ಉದ್ಭವ ಆಗಲ್ಲ, ಆ ಪ್ರಮೇಯ ಕೂಡ ಎದುರಾಗಲ್ಲ. ಬಿಎಸ್ವೈ ಭೇಟಿಯಾಗಿದ್ರೆ ಆ ದಾಖಲೆ ಬಿಡುಗಡೆ ಮಾಡ್ಲಿ” ಎಂದು ರೇಣುಕಾಚಾರ್ಯಗೆ ಸವಾಲೆಸೆದರು.