ಕರ್ನಾಟಕದಲ್ಲಿ ಹುಬ್ಬಳ್ಳಿಯಿಂದ ಲೋಕ ಸಮರದ ರಣಕಹಳೆ ಮೊಳಗಿಸಲು ಬಿಜೆಪಿ ರೆಡಿಯಾಗಿದೆ. ನಾಳೆ ಹುಬ್ಬಳ್ಳಿಯಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಮೂಲಕ ಕರ್ನಾಟದಲ್ಲಿ ಅಧಿಕೃತವಾಗಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.
ಸಮಾವೇಶಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಗಬ್ಬೂರು ಬಳಿಯ ಕೆಎಲ್‌ಇ ಮೈದಾನದಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಮೋದಿ ಸೇರಿ ಬಿಜೆಪಿ ನಾಯಕರು ಕುಳಿತುಕೊಳ್ಳಲು ಪ್ರಧಾನ ವೇದಿಕೆ ಸಿದ್ಧಪಡಿಸಲಾಗುತ್ತಿದೆ.
ಇನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ್ ಜೋಶಿ ಸಮಾವೇಶದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಮಾವೇಶಕ್ಕೂ ಮುನ್ನ ಪ್ರಧಾನಿಯವರು ತ್ರಿಬಲ್ ಐಟಿ ಕಟ್ಟಡದ ಶಂಕುಸ್ಥಾಪನೆ, ಪ್ರಧಾನಿ ಆವಾಸ್ ಯೋಜನೆಯ ಮನೆಗಳ ಲೋಕಾರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇನ್ನು ಸಮಾವೇಶದ ಕಣ್ಗಾವಲಿಗೆ ವಿಶೇಷ ಭದ್ರತಾ ಪಡೆ ಈಗಾಗಲೇ ನಗರಕ್ಕೆ ಆಗಮಿಸಿದ್ದು, 5 ಎಸ್ಪಿ, 30 ಡಿವೈಎಸ್ಪಿ, 60 ಸಿಪಿಐ, 200 ಪಿಎಸ್ಐ ಸೇರಿದಂತೆ 3,500ಕ್ಕು ಹೆಚ್ಚು ಪೋಲಿಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.