Monday, December 23, 2024

ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಸಿಡಿಸಿದ್ರು ಆಡಿಯೋ ಬಾಂಬ್​..!

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಅವರ ವಿರುದ್ಧ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಆಡಿಯೋ ಬಾಂಬ್​ ಸಿಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆಪರೇಷನ್​ ಕಮಲದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರ ವಿರುದ್ಧ ಗರಂ ಆದರು. ಆಷ್ಟೇ ಅಲ್ಲದೇ ಅವರ ವಿರುದ್ಧ ಆಡಿಯೋವೊಂದನ್ನು ರಿಲೀಸ್​ ಕೂಡ ಮಾಡಿದ್ರು.
ಗುರುಮಿಠಕಲ್ ಶಾಸಕ ನಾಗನಗೌಡ ಅವರಿಗೆ ಬಿಜೆಪಿ ಆಮಿಷವನ್ನೊಡ್ಡಿದೆ ಅಂತ ಆರೋಪ ಮಾಡಿರುವ ಸಿಎಂ, ನಾಗನಗೌಡ ಅವರ ಮಗ ಶರಣಗೌಡ ನಾಯಕ ಅವರ ಜೊತೆ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾಗಿರೋ ಆಡಿಯೋವೊಂದನ್ನು ಬಿಡುಗಡೆ ಮಾಡಿದರು.
25 ಕೋಟಿ ರೂ ಹಣ ನೀಡುತ್ತೇವೆ. ಚುನಾವಣೆಯಲ್ಲಿ ಟಿಕೆಟ್​ ನೀಡುತ್ತೇವೆ. ಗೆದ್ದ ನಂತರ ಜಿಲ್ಲಾ ಉಸ್ತುವಾರಿ ಮಂತ್ರಿ ಮಾಡ್ತೀವಿ, ಪ್ರಭಾವಿ ಖಾತೆಯನ್ನೂ ನೀಡುತ್ತೇವೆ ಎಂದು ಯಡಿಯೂರಪ್ಪ ಆಮಿಷವೊಡ್ಡಿದ್ದಾರೆಂದು ಹೇಳಲಾಗುತ್ತಿದೆ.
ಶರಣಗೌಡ ಅವರಿಗೆ ಮುಂಬೈಗೆ ಹೋಗುವಂತೆ ಯಡಿಯೂರಪ್ಪ ತಿಳಿಸಿದ್ದಾರಂತೆ. ಅಲ್ಲಿ ವಿಜಯೇಂದ್ರ ಅವರು ಅಲ್ಲಿ ಹಣಕಾಸು ವ್ಯವಹಾರ ನೋಡಿಕೊಳ್ತಾರೆ ಎಂದಿದ್ದೂ ಅಲ್ಲದೆ ‘ಬ್ರದರ್ 50 ಕೋಟಿ ರೂ ಕೊಟ್ಟು ಸ್ಪೀಕರ್​​ ಅವರನ್ನೇ ಬುಕ್​ ಮಾಡಿದ್ದೀವಿ. ಇದೆಲ್ಲದರ ಜೊತೆಗೆ ಕೇಸ್​ ದಾಖಲಾದ್ರೆ ಅಮಿತ್​ ಶಾ, ಮೋದಿ ಜಡ್ಜ್​ಗಳ ಜೊತೆ ನೋಡಿಕೊಳ್ತಾರೆ’ ಅಂತ ಹೇಳಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

RELATED ARTICLES

Related Articles

TRENDING ARTICLES