Saturday, December 9, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಬಜೆಟ್​ Live ಅಪ್​ಡೇಟ್ಸ್​

ಬಜೆಟ್​ Live ಅಪ್​ಡೇಟ್ಸ್​

ಮೈತ್ರಿ ಸರ್ಕಾರದ ಎರಡನೇ ಬಜೆಟ್​ ಮಂಡನೆ ಆಗುತ್ತಿದ್ದು, ಲೋಕಸಭಾ ಚುನಾವಣೆ ಸಮೀಪಿಸುತ್ತಿರೋದ್ರಿಂದ ಜನಸಾಮಾನ್ಯರ ಪರವಾದ ಹಾಗೂ ರೈತ ಪರವಾದ ಬಜೆಟ್​ ಮಂಡನೆ ಆಗೋ ನಿರೀಕ್ಷೆ ಗರಿಗೆದರಿದೆ. ಬಜೆಟ್​ನ ಕ್ಷಣ ಕ್ಷಣದ ಮುಖ್ಯಾಂಶಗಳು ಇಲ್ಲಿವೆ.

*ತಲಾ 100 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ ವಿಜಯಪುರ ಮತ್ತು ಬೀದರ್ ಮತ್ತು ವಿಜಯಪುರಗಳಲ್ಲಿ ತಲಾ 1000 ಬಂಧಿಗಳ ಸಾಮರ್ಥ್ಯವುಳ್ಳ ಪ್ರತ್ಯೇಕ ವಿಶಿಷ್ಟ ಕೇಂದ್ರ ಕಾರಾಗೃಹ ಹಾಗೂ ಅರಸೀಕೆರೆಯಲ್ಲಿ 200 ಬಂಧಿ ಸಾಮರ್ಥ್ಯವುಳ್ಳ ಉಪಕಾರಾಗೃಹ ನಿರ್ಮಾಣ. ಆಯವ್ಯಯದಲ್ಲಿ 30 ಕೋಟಿ ರೂ. ಅನುದಾನ.

*ಪೊಲೀಸ್ ಕಾಲೋನಿಗಳಲ್ಲಿ ಮೂಲಸೌಲಭ್ಯ ಒದಗಿಸಲು 20 ಕೋಟಿ ರೂ. ಅನುದಾನ

*ಬೆಂಗಳೂರು ನಗರದಲ್ಲಿ 8 ಹೊಸ ಸೈಬರ್ ಎಕಾನಾಮಿಕ್ ನಾರ್ಕೋಟಿಕ್ ವಿಂಗ್ ಪ್ರಾರಂಭಿಸಲು 4 ಕೋಟಿ ರೂ. ಅನುದಾನ. 

*ತುಳು, ಕೊಡವ ಮತ್ತು ಕೊಂಕಣಿ ಭಾಷಾ ಚಲನಚಿತ್ರಗಳನ್ನ ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮ; 1 ಕೋಟಿ ರೂ. ಅನುದಾನ.

*ಪ್ರವಾಸಿಗರನ್ನು ಆಕರ್ಷಿಸಲುಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನಆಯೋಜನೆಗೆ ₹2 ಕೋಟಿ ಅನುದಾನ.

*ವಿಶ್ವ ವಿಖ್ಯಾತ ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಕೆಎಸ್ಟಿಡಿಸಿ ವತಿಯಿಂದ ಲಂಡನ್ ಬಿಗ್ ಬಸ್ ಮಾದರಿಯ 06 ಡಬಲ್ ಡೆಕ್ಕರ್ ತೆರೆದ ಬಸ್ ಸೇವೆ ಪ್ರಾರಂಭ; 5 ಕೋಟಿ ರೂ. ಅನುದಾನ.

*ಗಾಂಧೀಜಿ 150ನೇ ಜನ್ಮದಿನ ಆಚರಣೆಗೆ 5 ಕೋಟಿ ರೂ. ವಿಶೇಷ ಅನುದಾನ

*ಪಣಂಬೂರು ಮತ್ತು ಸಸಿಹಿತ್ಲುವಿನಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ  7 ಕೋಟಿ ರೂ. ಅನುದಾನ

*ಹಂಪಿಯಲ್ಲಿಹಂಪಿ ವ್ಯಾಖ್ಯಾನ ಕೇಂದ್ರಹಾಗೂ ವಿಜಯಪುರದಲ್ಲಿವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರವನ್ನು ಸ್ಥಾಪಿಸಲು ತಲಾ 1 ಕೋಟಿ ರೂ. ಅನುದಾನ

*ವಿಶ್ವ ವಿಖ್ಯಾತ ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಕೆಎಸ್ಟಿಡಿಸಿ ವತಿಯಿಂದ ಲಂಡನ್ ಬಿಗ್ ಬಸ್ ಮಾದರಿಯ 06 ಡಬಲ್ ಡೆಕ್ಕರ್ ತೆರೆದ ಬಸ್ ¸ಸೇವೆ ಪ್ರಾರಂಭ; 5 ಕೋಟಿ ರೂ. ಅನುದಾನ.

*ಬಾದಾಮಿಯನ್ನು ವಿಶ್ವವಿಖ್ಯಾತ ಪ್ರವಾಸಿ ತಾಣವನ್ನಾಗಿ ಮತ್ತು ಕರಕುಶಲ ಮಾರುಕಟ್ಟೆಯನ್ನಾಗಿ ಅಭಿವೃದ್ಧಿ ಪಡಿಸಲು 25 ಕೋಟಿ ರೂ. ಅನುದಾನ.

*ಕಾರ್ಯನಿರತ ಪತ್ರಕರ್ತರ ಕ್ಷೇಮ ನಿಧಿ ದತ್ತಿ ಹಾಗೂ ಹಿರಿಯ ಪತ್ರಕರ್ತರ ಕ್ಷೇಮನಿಧಿ ದತ್ತಿಗಳಿಗೆ ತಲಾ 2

*ಗಾಂಧೀಜಿಯವರ 150ನೇ ಜನ್ಮದಿನ ಆಚರಣೆಗೆ 5 ಕೋಟಿ ರೂ. ವಿಶೇಷ ಅನುದಾನ.

ಕೋಟಿ ರೂ. ಹೆಚ್ಚುವರಿ ಅನುದಾನ.

*ತುಳು, ಕೊಡವ ಮತ್ತು ಕೊಂಕಣಿ ಭಾಷೆಯ ಚಲನಚಿತ್ರಗಳನ್ನು ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮ; 1 ಕೋಟಿ ರೂ. ಅನುದಾನ

*ಬೆಂಗಳೂರಿನಲ್ಲಿ 8 ಹೊಸ ಸೈಬರ್ ಎಕಾನಾಮಿಕ್ ನಾರ್ಕೋಟಿಕ್ ವಿಂಗ್ ಪ್ರಾರಂಭಿಸಲು 4 ಕೋಟಿ ರೂ. ಅನುದಾನ.

*ಸರ್ಕಾರದ ಯೋಜನೆಗಳ ಪ್ರಚಾರ ಕಾರ್ಯಗಳನ್ನು ಸಮರ್ಥವಾಗಿ ಕೈಗೊಳ್ಳಲು ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣ ಘಟಕವನ್ನು ಪಾರಂಭಿಸಲು ಕ್ರಮ,

*ವಿಜಯಪುರ ಮತ್ತು ಬೀದರ್​​ನಲ್ಲಿ ತಲಾ 1,000 ಬಂಧಿಗಳ ಸಾಮರ್ಥ್ಯವುಳ್ಳ ಪ್ರತ್ಯೇಕ ವಿಶಿಷ್ಟ ಕೇಂದ್ರ ಕಾರಾಗೃಹ ಹಾಗೂ ಅರಸೀಕೆರೆಯಲ್ಲಿ 200 ಬಂಧಿ ಸಾಮರ್ಥ್ಯವುಳ್ಳ ಉಪಕಾರಾಗೃಹ ನಿರ್ಮಾಣ. ಆಯವ್ಯಯದಲ್ಲಿ 30 ಕೋಟಿ ರೂ. ಅನುದಾನ.  

*ಅಗ್ನಿಶಾಮಕ ಇಲಾಖೆಯಿಂದ ಗಗನಚುಂಬಿ ಕಟ್ಟಡಗಳ ಬೆಂಕಿ ಅವಘಡ ತಡೆಯಲು, 90 ಮೀಟರ್ ಎತ್ತರ ತಲುಪಬಲ್ಲ ಏರಿಯಲ್ ಲ್ಯಾಡರ್ ಪ್ಲಾಟ್ಫಾರ್ಮ್ ವಾಹನ ಖರೀದಿಸಲು ಕ್ರಮ.

*ಸಾರ್ವಜನಿಕಖಾಸಗಿ ಸಹಭಾಗಿತ್ವದಲ್ಲಿ ದಾವಣಗೆರೆ, ಹೊಸಕೋಟೆ ಮತ್ತು ಮದ್ದೂರಿನಲ್ಲಿ ಸ್ವಯಂಚಾಲಿತ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರಗಳ ಸ್ಥಾಪನೆ

*ಒಳಾಡಳಿತ ಇಲಾಖೆಯ ಪೊಲೀಸ್ ಪೇದೆಗಳಿಗೆ ನೀಡಲಾಗುವ ಕಷ್ಟ ಪರಿಹಾರ ಭತ್ಯೆ 2,000 ರೂ.ಗಳಿಗೆ ಹೆಚ್ಚಳ; 103 ಕೋಟಿ ರೂ. ಅನುದಾನ.

*ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ 6,500 ಕೋಟಿ ರೂ. ಅನುದಾನ ವಾಣಿಜ್ಯ ಬ್ಯಾಂಕುಗಳಿಗೆ ಹಾಗೂ 6,150 ಕೋಟಿ ರೂ. ಸಹಕಾರಿ ಕ್ಷೇತ್ರಕ್ಕೆ ನಿಗದಿ. ಸಹಕಾರ ಬ್ಯಾಂಕ್ಗಳ ಸಾಲ ಮನ್ನಾ ಪ್ರಕ್ರಿಯೆ ಜೂನ್-2019 ರೊಳಗೆ ಪೂರ್ಣ; ವಾಣಿಜ್ಯ ಬ್ಯಾಂಕ್​ಗಳ ಸಾಲ ಯೋಜನೆಯೂ 2019-20 ರಲ್ಲಿ ಪೂರ್ಣ

* ಬಿಯರ್, ಡ್ರಾಟ್ ಬಿಯರ್, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಲೋ ಆಲ್ಕೊಹಾಲಿಕ್ ಬಿವೆರೇಜಸ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಲಾಗಿದೆ.

*ಕಾಂಪೀಟ್ವಿತ್ಚೈನಾ ಯೋಜನೆಗೆ 100 ಕೋಟಿ ರೂಪಾಯಿ.

*2019-20ರಲ್ಲಿ ಬೀದರ್ ನಾಗರಿಕ ವಿಮಾನ ನಿಲ್ದಾಣ ಕಾರ್ಯಾಚರಣೆ ಪ್ರಾರಂಭಿಸಲು ಕ್ರಮ.

*ಮಲೆನಾಡು ಹಾಗೂ ಕರಾವಳಿ ಜಿಲ್ಲೆಯಲ್ಲಿಶಾಲಾ ಸಂಪರ್ಕ ಸೇತುಯೋಜನೆಯಲ್ಲಿ 1,317  ಕಿರು ಸೇತುವೆಗಳನ್ನು ಪೂರ್ಣಗೊಳಿಸಲು ಕ್ರಮ.

* 40,000 ಹೊಸ ಟ್ರಾನ್ಸ್ಫಾರ್ಮರ್ ಅಳವಡಿಸಿ ರೈತರಿಗೆ ಗುಣಮಟ್ಟದ ವಿದ್ಯುಚ್ಛಕ್ತಿ ಒದಗಿಸಲಾಗುತ್ತದೆ.

* ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದ ನೀರಾವರಿ ಪಂಪ್ಸೆಟ್, ಭಾಗ್ಯ ಜ್ಯೋತಿಕುಟೀರಜ್ಯೋತಿ, ಗ್ರಾಹಕರ ಸಹಾಯಧನ 11,250 ಕೋಟಿ ರೂ.ಗಳಿಗೆ ಹೆಚ್ಚಳ

*ಅರ್ಕಾವತಿ ದಕ್ಷಿಣ ಪಿನಾಕಿನಿ ನದಿಗಳಲ್ಲಿ ಮತ್ತೆ ನೀರು ಹರಿಸುವ ಯೋಜನೆ.  ನೀರು ಕೊಯ್ಲು ಮಾಡುವ ಕಾರ್ಯಕ್ರಮ.

*ಮಾನಸ ಸರೋವರ ಯಾತ್ರಿಗಳ ಪ್ರೋತ್ಸಾಹ ಧನ ₹30 ಸಾವಿರಕ್ಕೆ ಏರಿಕೆ.

*ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರದ ಚೇಳೂರು,  ಬಾಗಲಕೋಟೆಯ ತೇರದಾಳಚಿಕ್ಕಮಗಳೂರು ಜಿಲ್ಲೆಯ ಕಳಸ ಹೊಸ ತಾಲೂಕುಗಳಾಗಿ ಘೋಷಣೆ.

*ಸಿಲ್ಕ್​​ ಬೋರ್ಡ್ನಿಂದ ಕೆ.ಆರ್​​ ಪುರಂಗೆ ಹೊರ ವರ್ತುಲ ರಸ್ತೆ 16579 ಕೋಟಿ ಮೀಸಲು

*ಮುಜರಾಯಿ ಇಲಾಖೆ ಜಮೀನು ಒತ್ತುವರಿ ತೆರವಿಗೆ ಸರ್ವೆ ಕಾರ್ಯ

*ಯಶವಂತರಪುರ ರೈಲ್ವೆ- ಮೆಟ್ರೋ ನಿಲ್ದಾಣಗಳ ನಡುವೆ ಪಾದಚಾರಿ ಸೇತುವೆ

*ಮೆಟ್ರೋ ಹಾಗೂ ಬಸ್​ಗಳಲ್ಲಿ ಬಳಸಬಹುದಾದ ಕಾರ್ಡ್​ಗಳ ಆರಂಭ. 10 ಮೆಟ್ರೋ ನಿಲ್ದಾಣಗಳಲ್ಲಿ ಟೂವಿಲರ್​ ಚಾರ್ಜಿಂಗ್ ವ್ಯವಸ್ಥೆ.

*ಗೊರಗುಂಟೆಪಾಳ್ಯದಲ್ಲಿ ಅಂಡರ್​ಪಾಸ್​ ನಿರ್ಮಾಣ.

*ಬೆಂಗಳೂರಿನಲ್ಲಿ 5 ಲಕ್ಷ ಬೀದಿದೀಪಗಳನ್ನು ಎಲ್​ಇಡಿ ಬೀದಿದೀಪಗಳಾಗಿ ಪರಿವರ್ತಿಸಲಾಗುತ್ತದೆ. ಚರ್ಚ್​ ಸ್ಟ್ರೀಟ್​, ಕಮರ್ಷಿಯಲ್ ಸ್ಟ್ರೀಟ್​, ಬ್ರಿಗೇಡ್​ ರಸ್ತೆಯನ್ನು ಪಾದಚಾರಿ ರಸ್ತೆಯನ್ನಾಗಿ ಬದಲಾಯಿಸಲು ಉದ್ದೇಶಿಲಾಗಿದೆ.

*ಬಿಬಿಎಂಪಿ ಪ್ರದೇಶಗಳಲ್ಲಿ ನವ ಬೆಂಗಳೂರು ಕ್ರಿಯಾ ಯೋಜನೆಗಾಗಿ 2,300 ಕೋಟಿ ರೂಪಾಯಿ ಮೀಸಲು

*ಬಿಎಂಟಿಸಿ ಬಸ್ಗಳನ್ನು ಹೆಚ್ಚಿಸಲು ಅನುದಾನ ಹೆಚ್ಚಳ. 50 ಕೋಟಿ ರೂಪಾಯಿ ಅನುದಾನ

*ಹಳ್ಳಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆ.

*2019ನ್ನು ಜಲವರ್ಷವೆಂದು ಘೋಷಣೆ ಮಾಡಲಾಗುತ್ತದೆ.

*ಹೈ-ಕ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ 1,500 ಕೋಟಿ ರೂ.

*ಅನ್ನಭಾಗ್ಯ ಯೋಜನೆಗೆ 3,700 ಕೋಟಿ ರೂಪಾಯಿ ಅನುದಾನ.

*13 ರಿಂದ 15 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗಾಗಿ ಮಿನಿ ಒಲಂಪಿಕ್ 2019 ಆಯೋಜಿಸಲಾಗುತ್ತದೆ.

*ಶ್ರೀನಾಡಪ್ರಭು ಕೇಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂಪಾಯಿ ಅನುದಾನ.

*ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಜನ್ಮಸ್ಥಳವಾದ ರಾಮನಗರದ ಬಾಣಂದೂರು ಗ್ರಾಮ ಅಭಿವೃದ್ಧಿಗೆ 25 ಕೋಟಿ ರೂ ಮೀಸಲು.

*ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಲಾಗುತ್ತದೆ.

* ಡಾ. ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ 25 ಕೋಟಿ ರೂ. ಮೀಸಲು.

*ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಚಾಲಕರ ದಿನಾಚರಣೆ ಆಚರಿಸಲಾಗುತ್ತದೆ. ಪ್ರತಿ ವರ್ಷವೂ 10 ಚಾಲಕರಿಗೆ 25 ಸಾವಿರ ಪುರಸ್ಕಾರ ನೀಡಲಾಗುತ್ತದೆ.

*ಪೆಟ್ರೋಲ್ ಆಟೋಗಳನ್ನು ಎಲೆಕ್ಟ್ರಿಕ್​ ಆಟೋಗಳಾಗಿ ಪರಿವರ್ತಿಸುವುದಕ್ಕಾಗಿ ಸಹಾಯಧನ.

*ಮೇಲುಕೋಟೆ ಅಭಿವೃದ್ಧಿಗಾಗಿ 5 ಕೋಟಿ ರೂ ಮೀಸಲು

*ಪೆಟ್ರೋಲ್​ ಆಟೋಗಳನ್ನು ಎಲೆಕ್ಟ್ರಿಕ್ ಆಟೋಗಳನ್ನಾಗಿ ಪರಿವರ್ತಿಸಲು

*ಬೆಂಗಳೂರಿನ ಆಟೋ, ಟ್ಯಾಕ್ಸಿ ಚಾಲಕರಿಗಾಗಿ ‘ಸಾರಥಿ ಸೂರು’ ಯೋಜನೆ ಜಾರಿ

*ವಸತಿ ಯೋಜನೆಗಳಿಗೆ 1,500 ಕೋಟಿ ಅನುದಾನ

*ಕ್ರೈಸ್ತ ಸಮುದಾಯ ಅಭಿವೃದ್ಧಿಗೆ 200 ಕೋಟಿ ರೂ ಮೀಸಲು

*5 ಮೊರಾರ್ಜಿ ದೇಸಾಯಿ ಮುಸ್ಲಿಂ ಹೆಣ್ಣುಮಕ್ಕಳ ವಸತಿ ಶಾಲೆ

*ಸವಿತಾ ಸಮಾಜ ಅಭಿವೃದ್ಧಿ ನಿಗಮದ ಸ್ಥಾಪನೆ

*ಕೋಲಾರದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪ ಕೇಂದ್ರದ ಸ್ಥಾಪನೆ

*ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂ ಅನುದಾನ

*ಅಲೆಮಾರಿ ಸಮುದಾಯದ ಅಭಿವೃದ್ಧಿಗೆ 25 ಕೋಟಿ ರೂ ಅನುದಾನ

*ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪನೆಗೆ 20 ಕೋಟಿ ರೂ ಮೀಸಲು

*ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ 30,445 ಕೋಟಿ ಅನುದಾನ ನೀಡಲಾಗುವುದು.

*ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ- ನಗರ ಪ್ರದೇಶಗಳಲ್ಲಿ 100 ಹೊಸ ಅಂಗನವಾಡಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು. 100 ಅಂಗನವಾಡಿ ಕಟ್ಟಡಗಳ ದುರಸ್ಥಿ ಮಾಡಲಾಗುತ್ತೆ. –

*ಬಿಪಿಎಲ್​ ಕುಟುಂಬದ ಮಹಿಳೆಯರಿಗೆ ಪ್ರಸವ ಪೂರ್ವ ಮತ್ತು ಪ್ರಸವ ನಂತರ ಸಹಾಯಧನವನ್ನು 2 ಸಾವಿರ ರೂಗಗಳಿಗೆ ಏರಿಕೆ. ಇದಕ್ಕಾಗಿ 2 ಸಾವಿರ ಕೋಟಿ ರೂ ಮೀಸಲು.

*ಹುಬ್ಬಳ್ಳಿಯಲ್ಲಿ ಕರ್ನಾಟಕ ಕ್ಯಾನ್ಸರ್​ ಥೆರಪಿ ಸಂಶೋಧನಾ ಸಂಸ್ಥೆಗೆ 4 ಸಾವಿರ ಕೋಟಿ ರೂ

*ಆಯುಷ್ಮಾನ್​ ಭಾರತ್​ ಆರೋಗ್ಯ ಕರ್ನಾಟಕ ಯೋಜನೆ

*ಹಾಸನದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆ.

*ಆಧಾರ್​ ಆಧರಿತ ಡಿಜಿಟಲ್​ ಮಾರ್ಕ್ಸ್ ಕಾರ್ಡ್ ಮತ್ತು ಪದವಿ ಪ್ರಮಾಣಪತ್ರವನ್ನೂ ಆನ್​ಲೈನ್​ನಲ್ಲೇ ಸಿಗುವಂತೆ ಮಾಡೋದು.

*ಎಸ್​ಎಸ್​ಎಲ್​ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿ ಜಿಲ್ಲೆಯ 20 ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್​

*4 ವರ್ಷಗಳಲ್ಲಿ 1 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ – ಭಾಷಾ ಕೌಶಲ್ಯ ತರಬೇತಿ ಕೇದ್ರ ಸ್ಥಾಪನೆ- ಶಿಕ್ಷಕರಿಗಾಗಿ ಗುರು ಚೈತನ್ಯ ಕಾರ್ಯಕ್ರಮ.

*ಕೆರೆ ತುಂಬಿಸೋ ಯೋಜನೆಗೆ 1,600 ಕೋಟಿ – ಶಿಕಾರಿಪುರದಲ್ಲಿ ಕೆರೆ ತುಂಬಿಸೋ ಯೋಜನೆಗೆ 200 ಕೋಟಿ-ಬದಾಮಿಯಲ್ಲಿ 300 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ. 400 ಕೋಟಿ ವೆಚ್ಚದಲ್ಲಿ ಮಂಡ್ಯ ವಿಶ್ವೇಶ್ವರ ನಾಲೆ ಅಭಿವೃದ್ಧಿ. ಕಾಲುವೆಗಳ ಆಧುನೀಕರಣಕ್ಕೆ 860 ಕೋಟಿ ರೂ. ಏತನೀರಾವರಿ ಯೋಜನೆಗಾಗಿ 1,553 ಕೋಟಿ ರೂ.

*ಜಲಸಂಪನ್ಮೂಲ ಇಲಾಖೆಗೆ 17,202 ಕೋಟಿ ಅನುದಾನ

*ಮೀನುಗಾರಿಗೆ ದೋಣಿಗಳಿಗಾಗಿ ಶೇ. 50 ರಷ್ಟು ಸಹಾಯಧನ ನೀಡಲಾಗುವುದು : ಕುಮಾರಸ್ವಾಮಿ

*ಗದಗದಲ್ಲಿ ಹೆಸರುಬೆಳೆ ಸಂಸ್ಕರಣಾ ಘಟಕ ನಿರ್ಮಾಣ

*ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ – ಆಭರಣಗಳ ಮೇಲೆ ಬೆಳೆ ಸಾಲ – ರೈತ ಮಹಿಳೆಯರ ಚಿನ್ನದ ಮೇಲೆ ಶೇ.3ರಷ್ಟು ಬಡ್ಡಿದರದಲ್ಲಿ ಸಾಲ : ಕುಮಾರಸ್ವಾಮಿ

*500 ಸಂಯುಕ್ತ ಸಹಕಾರ ಸಂಘಗಳ ಸ್ಥಾಪನೆಗೆ 5 ಕೋಟಿ ರೂ : ಸಿಎಂ

*ಸಿರಿಧಾನ್ಯಗಳಿಗೆ ಬೆಂಬಲ ಬೆಲೆ. ನಂದಿನಿ ಪಾರ್ಲರ್​ಗಳಲ್ಲಿ ಸಿರಿಧಾನ್ಯ ಮಾರಾಟಕ್ಕೆ ಅವಕಾಶ- ಕುಮಾರಸ್ವಾಮಿ

*ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡೋ ಧ್ಯೇಯ ಸರ್ಕಾರದ್ದು. ರೈತ ಕಣಜ ಯೋಜನೆಯಡಿ ಎಲ್ಲಾ ಮಾರುಕಟ್ಟೆಗಳಲ್ಲಿ ಸಂಗ್ರಹಣಾ ಘಟಕ ಸ್ಥಾಪಿಸಲಾಗುವುದು. ಇದಕ್ಕಾಗೊ 510 ಕೋಟಿ ರೂ ಮೀಸಲಿರಿಸಲಾಗುವುದು. ಹಾಗೆಯೇ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ವಯಂಚಾಲಿತ ಹಾಲು ಶೇಖರಣಾ ಘಟಕ ಸ್ಥಾಪಿಸಲಾಗುವುದು – ಕುಮಾರಸ್ವಾಮಿ

* ಡಿಸೇಲ್, ಸೀಮೆಎಣ್ಣೆ ಸಬ್ಸಿಡಿ ಮುಂದುವರಿಕೆ.

*ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2500 ಕೋಟಿ

*ಪ್ರತಿ ಲೀಟರ್ ಹಾಲಿನ ಪ್ರೋತ್ಸಾಹ ಧನ 5 ರೂನಿಂದ 6ಕ್ಕೆ ಏರಿಕೆ.

* ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 10 ಕೋಟಿ ಉದ್ಯೋಗ ಸೃಷ್ಟಿ.

*ಜಾಗತಿಕ ಮಟ್ಟದಲ್ಲಿ ಬೆಂಗಳೂರನ್ನು ಮತ್ತಷ್ಟು ಆಕರ್ಷಣೀಯಗೊಳಿಸಲು 1.2 ಲಕ್ಷ ಕೋಟಿ ರೂ ಅನುದಾನ

*ಒಂದೇ ಸೂರಿನಡಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಒದಗಿಸಲು ಶಾಲೆಗಳ ಆರಂಭ : ಕುಮಾರಸ್ವಾಮಿ

*ಕುಡಿಯುವ ನೀರಿಗಾಗಿ ಜಲಧಾರೆ ಯೋಜನೆ – ನೀರಾವರಿ ಯೋಜನೆಗಳಿಗೆ 1,050 ರೂಪಾಯಿ ಅನುದಾನ : ಕುಮಾರಸ್ವಾಮಿ

*13,522 ಬೀದಿ ಬದಿ ವ್ಯಾಪಾರಿಗಳಿಗೆ 7.68 ಕೋಟಿ ರೂ ಬಡ್ಡಿ ರಹಿತ ಸಾಲ : ಸಿಎಂ ಕುಮಾರಸ್ವಾಮಿ

* ಸಿದ್ದಗಂಗಾ ಮಠದ ಮಾದರಿಯಲ್ಲಿಶಿಕ್ಷಣ ಮತ್ತು ದಾಸೋಹಕ್ಕೆ ನಮ್ಮ ಆಧ್ಯತೆ : ಕುಮಾರಸ್ವಾಮಿ

*ಮಲೆನಾಡು ಭಾಗದ ವಿದ್ಯಾರ್ಥಿಗಳಿಗಾಗಿ ಶಾಲಾ ಸಂಪರ್ಕ ಯೋಜನೆ- ಮಲೆನಾಡು, ಕರಾವಳಿ ಭಾಗದ ವಿದ್ಯಾರ್ಥಿಗಳ ರಕ್ಷಣೆಗೆ ಆದ್ಯತೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರಾಮುಖ್ಯತೆ : ಕುಮಾರಸ್ವಾಮಿ

* ಸಭಾತ್ಯಾಗ ಮಾಡಿದ ಬಿಜೆಪಿ

* ಇಸ್ರೇಲ್ ಮಾದರಿಯ ಕೃಷಿ ಜಾರಿಗೆ ಸಿದ್ಧತೆ ನಡೆಸುತ್ತಿದ್ದೇವೆ : ಸಿಎಂ ಹೆಚ್​ಡಿಕೆ

*ರೈತರ ಸಾಲಮನ್ನಾ ಯೋಜನೆಯನ್ನು ಸಮಪರ್ಕವಾಗಿ ಜಾರಿಗೆ ತರ್ತಿದ್ದೇವೆ. ಇಲ್ಲಿಯವರೆಗೆ ಒಟ್ಟು 12 ಲಕ್ಷ ಸಾಲ ಖಾತೆಗಳಿಗೆ 5,400 ಕೋಟಿರೂಗಳನ್ನು ಬಿಡುಗಡೆ ಮಾಡಿದ್ದೇವೆ : ಸಿಎಂ

*ಬರ ಪರಿಹಾರಕ್ಕೆ 2.5 ಸಾವಿರ ಕೋಟಿ ನೆರವನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. 900 ಕೋಟಿ ರೂ ಮಂಜುರಾಗಿದೆ.

*ಕೊಡಗಿನಲ್ಲಿ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡೋ ಕಾರ್ಯ ನಡೆದಿದೆ : ಕುಮಾರಸ್ವಾಮಿ

* ಸಾಮಾಜಿಕ ಭದ್ರತೆ ಮತ್ತು ಉದ್ಯೋಗ ಸೃಷ್ಟಿ ನಮ್ಮ ಮೊದಲ ಆದ್ಯತೆ.

*ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 256 ದಿನಗಳಾಗಿವೆ. ಈ ಅಲ್ಪಾವಧಿಯಲ್ಲಿ ಹಲವಾರು ಯೋಜನೆಗಳನ್ನು ನೀಡಿದ ಹೆಗ್ಗಳಿಕೆ ನಮ್ಮ ಸರ್ಕಾರದ್ದು :  ಕುಮಾರಸ್ವಾಮಿ

*ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಆರಂಭಿಸಿದ್ದಾರೆ. ಬಿಜೆಪಿ ಗದ್ದಲ ಶುರುಮಾಡಿದೆ.

 

LEAVE A REPLY

Please enter your comment!
Please enter your name here

Most Popular

Recent Comments