Sunday, June 23, 2024

ಆಪರೇಷನ್​​ ಕಮಲಕ್ಕೆ ಬ್ರೇಕ್​ ಹಾಕಲು ಆರ್​ಎಸ್​ಎಸ್ ಸೂಚನೆ..!

ಬೆಂಗಳೂರು : ಬಿಜೆಪಿಯ ನಡೆಗೆ ಸ್ವತಃ ಆರ್​ಎಸ್​ಎಸ್ಸೇ ಮುನಿಸಿಕಿಕೊಂಡಿದೆ. ಮೈತ್ರಿ ಸರ್ಕಾರ ಉರುಳಿಸುವ ಯತ್ನದಲ್ಲಿ ಬ್ಯುಸಿ ಇರೋ ಬಿಜೆಪಿ ವಿರುದ್ಧ ಆರ್​ಎಸ್​ಎಸ್​ ಅಸಮಧಾನ ವ್ಯಕ್ತಪಡಿಸಿದೆ.
ಆಪರೇಷನ್ ಕಮಲಕ್ಕೆ ಆರ್​ಎಸ್​ ವಿರೋಧ ವ್ಯಕ್ತಪಡಿಸಿದ್ದು, ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರನ್ನು ಕರೆದು ಆಪರೇಷನ್​ಗೆ ಬ್ರೇಕ್ ಹಾಕಿ ಅಂತ ಆರ್​ಎಸ್​ಎಸ್ ನಾಯಕರು ಸೂಚನೆ ನೀಡಿದ್ದಾರೆ ಅಂತ ತಿಳಿದುಬಂದಿದೆ. ಆದರೆ, ಬಿಎಸ್​ವೈ ಇದೇ ಕೊನೆಯ ಪ್ರಯತ್ನ ಎಂದು ಆರ್​ಎಸ್​ಎಸ್​ ನಾಯಕರ ಮನವೊಲಿಸಿದ್ದಾರೆ. ಬಿಎಸ್​ವೈ ಇದೇ ಕಡೆಯ ಪ್ರಯತ್ನ ಎಂದಿದ್ದಕ್ಕೆ ಆರ್​ಎಸ್​ಎಸ್​ ಒಪ್ಪಿಗೆ ನೀಡಿದೆ ಎಂದು ಹೇಳಲಾಗುತ್ತಿದೆ.

RELATED ARTICLES

Related Articles

TRENDING ARTICLES