Friday, July 19, 2024

ಲೋಕಸಭಾ ಚುನಾವಣೆಗೆ ಸ್ಪರ್ಧಿಸ್ತಾರಾ ವೀರೇಂದ್ರ ಸೆಹ್ವಾಗ್?

ಚಂಡೀಗಢ: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡೋದು ಬಹುತೇಕ ಕನ್ಫರ್ಮ್​ ಆಗಿದೆ. ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುವ ಮೂಲಕ ವೀರೂ ಮತ್ತೊಂದು ಹೊಸ ಇನ್ನಿಂಗ್ಸ್​ ಶುರುಮಾಡಲಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.
ಸೆಹ್ವಾಗ್ ಹರಿಯಾಣದಿಂದ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಬಿಜೆಪಿ ಸೆಹ್ವಾಗ್ ಅವರನ್ನು ತಮ್ಮ ಪಕ್ಷದಿಂದ ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಹರಿಯಾಣದ ಬಿಜೆಪಿ ಕೋರ್​​ಕಮಿಟಿ ಸಭೆಯಲ್ಲಿ ಸೆಹ್ವಾಗ್ ಭಾನುವಾರ ಭಾಗವಹಿಸಿದ್ದರು. ಸಭೆಯಲ್ಲಿ ರೋಹ್ಟರ್​ ಕ್ಷೇತ್ರದಿಂದ ಸೆಹ್ವಾಗ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ರೋಹ್ಟಕ್​ ಕ್ಷೇತ್ರದಿಂದ ಕಾಂಗ್ರೆಸ್ ಕ್ಯಾಂಡಿಡೇಟ್​ ದೀಪೆಂದರ್​ ಸಿಂಗ್ ಅವರು ಸತತ ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದಾರೆ. ಇವರನ್ನು ಸೋಲಿಸಲು ಬಿಜೆಪಿ ಸೆಹ್ವಾಗ್ ಅವರನ್ನು ಕಣಕ್ಕಿಳಿಸೋ ಪ್ಲಾನ್ ಮಾಡಿದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ.

RELATED ARTICLES

Related Articles

TRENDING ARTICLES