Friday, September 20, 2024

ಸಿಎಂ ಮಮತಾಗೆ ‘ಸುಪ್ರೀಂ’ ಮುಖಭಂಗ..!

ದೆಹಲಿ: ಸುಪ್ರೀಂಕೋರ್ಟ್​ನಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಭಾರೀ ಮುಖಂಭವಾಗಿದೆ. ಸುಪ್ರೀಂಕೋರ್ಟ್​ ತ್ರಿಸದಸ್ಯ ಪೀಠದಲ್ಲಿ ಸಿಜೆ ರಂಜನ್​ ಗೋಗಯ್​ ಸಿಬಿಐ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದರು. ರಾಜೀವ್ ಕುಮಾರ್ ಫೆಬ್ರವರಿ 20ರಂದು ಮೇಘಾಲಯದ ಶಿಲ್ಲಾಂಗ್​ನಲ್ಲಿ ಸಿಬಿಐ ಮುಂದೆ ಹಾಜರಾಗುವಂತೆ ಕೋರ್ಟ್​ ನಿರ್ದೇಶಿಸಿದೆ.

ಚಿಟ್​ಫಂಡ್ ಹಗರಣದ ಸಂಬಂಧ ಕಮಿಷನರ್​ ರಾಜೀವ್ ಕುಮಾರ್ ವಿಚಾರಣೆಗೆ ಬಂದ ಸಿಬಿಐ ಅಧಿಕಾರಿಗಳನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದರು. ಘಟನೆ ಸಂಬಂಧ ಸಿಬಿಐ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಸಿಬಿಐ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ನಾವು ಕೋಲ್ಕತ್ತಾ ನಗರ ಪೊಲೀಸ್​ ಆಯುಕ್ತ ರಾಜೀವ್ ಕುಮಾರ್ ಅವರನ್ನ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದೇವೆ. ಅವರು ಯಾಕೆ ಸಿಬಿಐ ವಿಚಾರಣೆಗೆ ಹಾಜರಾಗಿಲ್ಲ? ವಿಚಾರಣೆಗೆ ಹಾಜರಾಗಲು ಏನು ಸಮಸ್ಯೆ? ಎಂದು ಕೋರ್ಟ್​ ಪ್ರಶ್ನಿಸಿದೆ. ಸುಪ್ರೀಂಕೋರ್ಟ್ ಏನೇ ತೀರ್ಪು ನೀಡಿದ್ರೂ ಪಾಲಿಸಲು ನಾವು ಬದ್ಧ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES