Friday, September 20, 2024

ಆಪರೇಷನ್​ ಸಕ್ಸಸ್​ಗೆ ಬಿಜೆಪಿಯಿಂದ ಮಹಾಯಾಗ!?

ಬೆಂಗಳೂರು : ಆಪರೇಷನ್​ ಕಮಲದ ಸಕ್ಸಸ್​ಗೆ ಬಿಜೆಪಿ ಯಾಗದ ಮೊರೆ ಹೋಗಿದೆ ಎಂದು ಹೇಳಲಾಗುತ್ತಿದೆ. ಇಷ್ಟಾರ್ಥ ಸಿದ್ಧಿಗಾಗಿ ಬಿಜೆಪಿ ಬೆಂಗಳೂರಿನ ಬಿಇಎಲ್​ ಬಳಿಯ ಗಣೇಶ ದೇವಸ್ಥಾನದಲ್ಲಿ ಗರುಡಾಚಯನ ಮಹಾಯಾಗ ಹಮ್ಮಿಕೊಂಡಿದೆ.
ಲಕ್ಷ್ಮೀನಾರಾಯಣಯಾಜಿ ಅವರ ನೇತೃತ್ವದಲ್ಲಿ ಇಂದಿನಿಂದ 8 ದಿನಗಳ ಕಾಲ ಈ ಯಾಗ ನಡೆಯಲಿದ್ದು, ಕೇಂದ್ರದ ಹಾಲಿ ಸಚಿವರು ಮತ್ತು ನಗರದ ಓರ್ವ ಶಾಸಕರು ಪರೋಕ್ಷವಾಗಿ ಯಾಗದ ಸಾರಥ್ಯವಹಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಈ ಮಹಾಯಜ್ಞಕ್ಕೆ 30 ಲಕ್ಷ ರೂಗಳಿಗೂ ಹೆಚ್ಚು ವೆಚ್ಚ ಆಗಲಿದೆ. 
ಒಟ್ಟಾರೆ ಬಹುಶಃ ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ಬಜೆಟ್​ ಡೆಡ್​ಲೈನ್ ನೀಡಿದೆ ಇರಬೇಕು. ಅದೇ ಕಾರಣಕ್ಕೆ ಆಪರೇಷನ್​ ಯಶಸ್ಸಿಗಾಗಿ ಯಾಗದ ಮೊರೆ ಹೋಗಿರಬಹುದು.

RELATED ARTICLES

Related Articles

TRENDING ARTICLES