Wednesday, January 22, 2025

ಸರ್ಕಾರ ಸುಭದ್ರವಾಗಿಲ್ಲ ಅಂದ್ರು ಸಚಿವ ಜಾರಕಿಹೊಳಿ!

ದಾವರಣಗೆರೆ : ಸರ್ಕಾರ ಸುಭದ್ರವಾಗಿಲ್ಲ.., ಹೀಗಂತ ಹೇಳಿದ್ದು ಬಿಜೆಪಿ ಅವರಲ್ಲ. ಬದಲಾಗಿ ಸಚಿವ ಸತೀಶ್ ಜಾರಕಿಹೊಳಿ!
ದಾವಣಗೆರೆಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಸುಭದ್ರವಾಗಿದೆ ಅಂತ ಹೇಳೋಕೆ ಆಗಲ್ಲ. ನಮಗೂ ಆತಂಕಗಳಿವೆ. ಆದ್ರೂ ಸರ್ಕಾರ ಬೀಳಲ್ಲ. ಆಪರೇಷನ್ ಕಮಲ ಯಶಸ್ವಿಯಾಗಲ್ಲ’ ಅಂದ್ರು.
ಇನ್ನು ಶಾಸಕರು ಸಾಮೂಹಿಕ ರಾಜೀನಾಮೆ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಯಾರೂ ಪಕ್ಷ ಬಿಟ್ಟು ಹೋಗ್ತಾರೆಂದು ಅನಿಸುವುದಿಲ್ಲ ಎಂದರು. ರಮೇಶ್ ಜಾರಕಿಹೊಳಿ ಬಗ್ಗೆ ಕೇಳಿದ್ದಕ್ಕೆ, ಅವ್ರು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಪಕ್ಷದಲ್ಲಿ ಇರೋದಾಗಿ ಬರೆದುಕೊಟ್ಟಿದ್ದಾರೆ. ಹಾಗಾಗಿ ಪಕ್ಷ ಬಿಟ್ಟು ಹೋಗಲ್ಲ ಅನ್ನೋದು ನನ್ನ ನಂಬಿಕೆ ಅಂತ ಹೇಳಿದ್ರು.

RELATED ARTICLES

Related Articles

TRENDING ARTICLES