Monday, December 23, 2024

ಸಿದ್ದರಾಮಯ್ಯ ಅವರನ್ನು ಹುಚ್ಚ ಅಂತ ಕರೆದ್ರು ಈಶ್ವರಪ್ಪ!

ದಾವಣಗೆರೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಮುಖಂಡ ಈಶ್ವರಪ್ಪ ಹುಚ್ಚ ಎಂದು ಕರೆದಿದ್ದಾರೆ.
ದಾವರಣಗೆರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸಾಲಯದಲ್ಲಿ ಇರುವಾಗ ತಾನು ಎಲೆಕ್ಷನ್​ಗೆ ಕಂಟೆಸ್ಟ್ ಮಾಡಲ್ಲ ಅಂತ ಹೇಳ್ತಾರೆ. ಆದ್ರೆ, ಅಲ್ಲಿಂದ ಬಂದ್ಮೇಲೆ ನಾನೇ ಸಿಎಂ ಅಂತಾರೆ. ಹೀಗಾಗಿ ಇವ್ರನ್ನ ಹುಚ್ಚ ಅಂತ ಕರೆಯದೇ ಮತ್ತೇನು ಹೇಳಬೇಕು ಅಂತ ಪ್ರಶ್ನಿಸಿದ್ರು.
ವಿಧಾನಸಭಾ ಎಲೆಕ್ಷನ್ ಆದ್ಮೇಲಿಂದ ಕಾಂಗ್ರೆಸ್​ ದಿಕ್ಕೆಟ್ಟು ಹೋಗಿದೆ. ಕಾಂಗ್ರೆಸ್​ಗೆ ತನ್ನವರನ್ನು ಹಿಡಿದಿಟ್ಟು ಕೊಳ್ಳಲು ಆಗ್ತಿಲ್ಲ. ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಸ್ಥಾನಕ್ಕೆ ರಾಜೀನಾಮೆ ಕೊಡ್ಬೇಕು ಎಂದರು.
ಆಪರೇಷನ್ ಕಮಲದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರದ ಪತನಕ್ಕೆ ಯಾವ್ದೇ ಆಪರೇಷನ್ನೂ ಬೇಕಾಗಿಲ್ಲ. ಸಿದ್ದರಾಮಯ್ಯ, ಪರಮೇಶ್ವರ್, ಖರ್ಗೆ ಬಣದವರೇ ಹೊಡೆದಾಡಿಕೊಂಡು ಸರ್ಕಾರ ಕೆಡವುತ್ತಾರೆ ಎಂದು ವಾಗ್ದಾಳಿ ನಡೆಸಿದ್ರು.

RELATED ARTICLES

Related Articles

TRENDING ARTICLES