Monday, December 23, 2024

ರ‍್ಯಾಲಿಗೆ ಬರಲು ಬಿಡದ ಮಮತಾ ಸರ್ಕಾರ; ಫೋನ್​ ಮೂಲಕವೇ ಭಾಷಣ ಮಾಡಿದ ಯೋಗಿ!

ಉತ್ತರಪ್ರದೇಶ : ಪಶ್ಚಿಮ ಬಂಗಾಳದಲ್ಲಿ ಮತ್ತೆ ಬಿಜೆಪಿ ಹಾಗೂ ಟಿಎಂಸಿ ನಡುವಿನ ಮುನಿಸು ತಾರಕಕ್ಕೇರಿದೆ. ಮಮತಾ ಬ್ಯಾನರ್ಜಿ ಸರ್ಕಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಅವರಿಗೆ ಬಂಗಾಳದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಲು ಅವಕಾಶ ಕೊಟ್ಟಿಲ್ಲ!
ಸರ್ಕಾರದ ಈ ನಡೆಯನ್ನು ಬಿಜೆಪಿ ಖಂಡಿಸಿದೆ. ಭಾಷಣಕ್ಕೆ ಅವಕಾಶ ನೀಡದ ಸರ್ಕಾರಕ್ಕೆ ಫೋನ್​ ಮೂಲಕ ಭಾಷಣ ಮಾಡಿ ತಿರುಗೇಟು ಕೊಟ್ಟಿದ್ದಾರೆ ಯೋಗಿ ಆಧಿತ್ಯನಾಥ್.
ಮಮತಾ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಯೋಗಿ ರ‍್ಯಾಲಿಗೆ ಅನುಮತಿ ನಿರಾಕರಿಸಿದ್ದು, ಡಾರ್ಜಲಿಂಗ್​​ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್​​ಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ! ಇದರಿಂದಾಗಿ ಯೋಗಿ ಆಧಿತ್ಯನಾಥ್ ಲಕ್ನೋದಿಂದಲೇ ಫೋನ್​ ಮೂಲಕ ಪ.ಬಂಗಾಳದ ರ‍್ಯಾಲಿ ಉದ್ದೇಶಿಸಿ ಭಾಷಣ ಮಾಡಿದ್ದಾರೆ.
ಮಮತಾ ಸರ್ಕಾರದ ವಿರುದ್ಧ ಕೆಂಡಮಂಡಲವಾಗಿರೋ ಯೋಗಿ, ಇದು ಪ್ರಜಾಪ್ರಭುತ್ವದ ಕಗ್ಗೊಲೆ. ‘ಬಂಗಾಳದಲ್ಲಿ ಟಿಎಂಸಿ ವಿರುದ್ಧ ನಾವು ಸ್ಪರ್ಧಿಸುತ್ತೇವೆ’. ‘ಮಮತಾ ಬ್ಯಾನರ್ಜಿ ಜನರ ನಂಬಿಕೆಯನ್ನೇ ಕಸಿದುಕೊಳ್ಳುತ್ತಿದ್ದಾರೆ’. ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದ್ದಾರೆ.

RELATED ARTICLES

Related Articles

TRENDING ARTICLES