ಹಾಸನ : ಕಾಂಗ್ರೆಸ್ ಶಾಸಕರು ತಮ್ಮ ಹೈಕಮಾಂಡ್ ಮಾತಿಗೂ ಬೆಲೆ ಕೊಡದೇ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ನಾಲಿಗೆ ಹರಿ ಬಿಡುತ್ತಲೇ ಇದ್ದು, ಇದೀಗ ಮಾಜಿ ಸಚಿವ ಎ.ಮಂಜು ಸರದಿ!
ಹಾಸನದಲ್ಲಿ ಮಾತನಾಡಿರುವ ಎ.ಮಂಜು, ”ಹೆಚ್.ಡಿ ಕುಮಾರಸ್ವಾಮಿ ಅವರನ್ನು ರಾಜ್ಯದ ಜನರ ಕೆಲಸ ಮಾಡಲಿ ಅಂತ ಸಿಎಂ ಮಾಡಿದ್ದೇವೆ. ಸುಮ್ಮನೇ ‘ಕೈ’ ಶಾಸಕರಿಂದ ತೊಂದರೆಯಾಗುತ್ತಿದೆ ಅಂತ ಹೇಳುವುದು ತಪ್ಪು” ಎಂದಿದ್ದಾರೆ.
ಸಿಎಂ ಬ್ಲಾಕ್ ಮೇಲ್ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯರನ್ನ ಹೊಗಳುತ್ತಾರೆ ಅಂತ ರಾಜೀನಾಮೆ ನೀಡುತ್ತೇನೆಂದು ಹೇಳುವುದು ತಪ್ಪು. ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿಯವರು ನಮ್ಮ ನಾಯಕರು. ನಮ್ಮ ಮನೆಯವರನ್ನು ಪ್ರೀತಿ ಮಾಡ್ತೀವಿ, ಹೊಗಳುತ್ತೇವೆ. ನಮಗೆ ಇವತ್ತಿಗೂ ಕೂಡ ಸಿದ್ದರಾಮಯ್ಯರ ಆಡಳಿತವೇ ಉತ್ತಮ ಆಡಳಿತ ಎಂದು ಹೇಳಿದ್ರು.