ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಮ್ಮ ನಿಜವಾದ ನಾಯಕರು ಎಂದು ಹೇಳುವ ಮೂಲಕ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಶಾಸಕ ಎಸ್.ಟಿ ಸೋಮಶೇಖರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರನ್ನ ನಿಯಂತ್ರಿಸಿ ಅನ್ನೋದು ತಪ್ಪು. ಶಾಸಕ S.T.ಸೋಮಶೇಖರ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಸಿದ್ದರಾಮಯ್ಯ ನಮ್ಮ ನಿಜವಾದ ನಾಯಕರು. ದೇವೇಗೌಡರ ನಂತರ ಅತ್ಯುತ್ತಮ ಸಿಎಂ ಸಿದ್ದರಾಮಯ್ಯ. ಜೆಡಿಎಸ್ 37 ಸ್ಥಾನ ಗೆದ್ರೂ ಸಿಎಂ ಸ್ಥಾನ ನೀಡಿದ್ದೇವೆ. ಇದು ನಮ್ಮ ಕಾಂಗ್ರೆಸ್ ನಾಯಕರ ದೊಡ್ಡತನ. ಇದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ಗೆ ಗೌರವ ನೀಡಬೇಕು. ಪದೇ ಪದೇ ರಾಜೀನಾಮೆ ಕೊಡುತ್ತೇನೆಂಬುದು ಸರಿಯಲ್ಲ.