Monday, June 24, 2024

ಶ್ರೀನಿವಾಸ್​ ಅಲ್ಲಿ ಇಲ್ದೇ ಇದ್ದಿದ್ರೆ ಅಹಿತಕರ ಘಟನೆ ನಡೀತಿತ್ತಂತೆ!

ದಾವಣಗೆರೆ : ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದಾಗ ಶ್ರೀ ಸಿದ್ಧಗಂಗಾ ಮಠದ ಬಂದೋಬಸ್ತ್​ನಲ್ಲಿದ್ದ ಐಪಿಎಸ್​ ಅಧಿಕಾರಿ ದಿವ್ಯಾ ಗೋಪಿನಾಥ್​ ಅವರನ್ನು ಸಚಿವ ಸಾ.ರಾ ಮಹೇಶ್ ನಿಂದಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಎಸ್​.ಆರ್​ ಶ್ರೀನಿವಾಸ್​ ಪ್ರತಿಕ್ರಿಯೆ ನೀಡಿದ್ದು, ”ತಾನು ಅಲ್ಲಿ ಇಲ್ಲದೇ ಇದ್ದಿದ್ದರೆ ಅಹಿತಕರ ಘಟನೆ ನಡೀತಿತ್ತು” ಅಂತ ಹೇಳಿದ್ದಾರೆ.
ದಾವಣಗೆರೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ದಿವ್ಯಾ ಗೋಪಿನಾಥ್ ತುಂಬಾ ಒಳ್ಳೆಯ ಅಧಿಕಾರಿ. ಘಟನೆ ನಡೆದಾಗ ನಾನೂ ಅವರ ಹಿಂದೆ ಇದ್ದೆ. ಸರ್ಕಾರದ ನಿರ್ದೇಶನದಂತೆ ಅವರು ಕರ್ತವ್ಯ ಮಾಡುತ್ತಿದ್ದರು. 15 ಲಕ್ಷ ಜನರಲ್ಲಿ ಸಚಿವರನ್ನು ಗುರುತಿಸುವುದು ಅಸಾಧ್ಯ. ಐಡಿ ಕಾರ್ಡ್ ಇಲ್ಲದಿದ್ದರಿಂದ ಒಳಗಡೆ ಬಿಡದೆ ತಡೆದಿದ್ದರು. ಆಗ ಕೋಪಗೊಂಡ ಮಹೇಶ್ ಅಧಿಕಾರಿ ವಿರುದ್ಧ ಹರಿಹಾಯ್ದರು. ಅಲ್ಲಿ ಅಹಿತಕರ ಘಟನೆ ನಡೆಯೋ ಮುನ್ಸೂಚನೆ ಸಿಕ್ಕಿತು. ತಕ್ಷಣ ಮಧ್ಯ ಪ್ರವೇಶಿಸಿ ನಾನು ಪರಿಸ್ಥಿತಿ ತಿಳಿಗೊಳಿಸಿದೆ” ಅಂತ ಹೇಳಿದ್ರು.

RELATED ARTICLES

Related Articles

TRENDING ARTICLES