ಬೆಂಗಳೂರು : ರಾಮನಗರ ಬಳಿಯ ಈಗಲ್ಟನ್ ರೆಸಾರ್ಟ್ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಕಂಪ್ಲಿಯ ರೌಡಿ ಶಾಸಕ ಜೆ.ಎನ್ ಗಣೇಶ್ ಇನ್ನೂ ಅರೆಸ್ಟ್ ಆಗಿಲ್ಲ!
ಗಣೇಶ್ ವಿರುದ್ಧ ಕೇಸ್ ದಾಖಲಾಗಿ 5ಗಳಾದ್ರೂ ರಾಮನಗರ ಎಸ್ ಪಿ ರಮೇಶ್ ನೇತೃತ್ವದ ಟೀಮ್ ಇನ್ನೂ ಅವರ ಹುಡುಕಾಟ ನಡೆಸುತ್ತಲೇ ಇದೆ.
ಗಣೇಶ್ ಬಗ್ಗೆ ಮಾಹಿತಿ ಕಲೆ ಹಾಕಿದ್ದರೂ ಕೂಡ ಗಣೇಶ್ ಇನ್ನೂ ಅರೆಸ್ಟ್ ಆಗಿಲ್ಲ. ಇದರಿಂದಾಗಿ ಗಣೇಶ್ ಬೆನ್ನಿಗೆ ಪೊಲೀಸರೇ ನಿಂತಿದ್ದಾರಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಇನ್ನು ರೌಡಿ ಪಟ್ಟ ಅಲಂಕರಿಸಿರುವ ಎಂಎಲ್ಎ ಗಣೇಶ್ ಕಾಂಗ್ರೆಸ್ನವರಾಗಿದ್ದು, ಅವರನ್ನು ಬಚಾವ್ ಮಾಡುವಂತೆ ಪೊಲಿಸರಿಗೇನಾದ್ರು ಸರ್ಕಾರದಿಂದ ಒತ್ತಡ ಇದೆಯಾ ಎಂಬ ಅನುಮಾನ ಕೂಡ ಮೂಡುತ್ತಿದೆ.
ಕಂಪ್ಲಿ ಎಂಎಎಲ್ಯಿಂದ ಹಲ್ಲೆಗೊಳಗಾದವರು ಬೇರೆ ಯಾರೂ ಅಲ್ಲ… ಅವರೂ ಶಾಸಕರೇ! ಶಾಸಕರ ಪರಿಸ್ಥಿತಿಯೇ ಹೀಗಾದ್ರೆ ಸಾಮಾನ್ಯರ ಪಾಡೇನು?